×
Ad

ಟಿಪ್ಪು ಜಯಂತಿ ವಿಚಾರದಲ್ಲಿ ಸಂಘಪರಿವಾರದಿಂದ ಹುಳಿಹಿಂಡುವ ಪ್ರಯತ್ನ: ಸಿಎಂ

Update: 2016-10-23 14:22 IST

ಮೈಸೂರು, ಅ.23: ಟಿಪ್ಪು ಜಯಂತಿಯನ್ನು‌ ಸರಕಾರದ ವತಿಯಿಂದ ಕಳೆದ ವರ್ಷ ಆಚರಿಸಲಾಗಿದೆ. ಈ ವರ್ಷವೂ ಆಚರಿಸಲಾಗುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸ್ವಾತಂತ್ರ್ಯ ಯೋಧ. ಅವರ ಜಯಂತಿ ಆಚರಣೆ ಮಾಡಿದರೆ ತಪ್ಪು ಹುಡುಕುವುದು ಸಂಕುಚಿತ ಮನೋಭಾವದವರು ಮಾಡುವ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗಳು, ಟಿಪ್ಪು ಜಯಂತಿ ಆಚರಣೆಯಲ್ಲಿ ತಪ್ಪು ಹುಡುಕುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ. ಇದರಲ್ಲಿ ಹುಳಿ ಹಿಂಡುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಿದೆ. ಅವರಿಗೆ ಅದೇ ಕೆಲಸ. ಸಮಾಜದಲ್ಲಿ ಸಾಮರಸ್ಯ ಇರಬಾರದು‌ ಎಂದವರು ಸದಾ ಬಯಸುತ್ತಾರೆ. ಸಾಮರಸ್ಯದಲ್ಲಿ ಹುಳಿ ಹಿಂಡುವ ಕೆಲಸವನ್ನು ತಾನು ಹುಟ್ಟಿದಾಗಿನಿಂದ ಆರೆಸ್ಸೆಸ್ ಈ ದೇಶದಲ್ಲಿ ಮಾಡಿಕೊಂಡು ಬಂದಿದೆ. ಟಿಪ್ಪು ಜಯಂತಿ ವೇಳೆ ಕಳೆದ ವರ್ಷ ಕೊಡಗಿನಲ್ಲಿ ಅಹಿತಕರ ಘಟನೆಗಳು ಸಂಭವಿಸಿತ್ತು. ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಗಳು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News