ಉಕ್ಕು ಸೇತುವೆ ಕುರಿತು ಜನರಿಗೆ ವಸ್ತುಸ್ಥಿತಿ ತಿಳಿಸುವ ಪ್ರಯತ್ನ: ಸಿಎಂ
Update: 2016-10-23 14:25 IST
ಮೈಸೂರು, ಅ.23: ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಸೇತುವೆಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸಚಿವ ಜಾರ್ಜ್ ಅವರು, ವಸ್ತುಸ್ಥಿತಿ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೂ ಯೋಜನೆ ಕುರಿತು ಜನರಿಗೆ ವಸ್ತುಸ್ಥಿತಿ ತಿಳಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜೂನ್ ತಿಂಗಳಲ್ಲಿ ಅಭಿಪ್ರಾಯ ಸಂಗ್ರಹಿಸಿದಾಗ ಶೇ.73ರಷ್ಟು ಮಂದಿ ಯೋಜನೆ ಪರವಾಗಿದ್ದರು. ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಲ್ಲವೇ ? ಆದರೂ ತಪ್ಪು ತಿಳಿವಳಿಕೆಗಳಿದ್ದರೆ ಅದನ್ನು ಸರಪಡಿಸಬೇಕಾಗುತ್ತದೆ. ನಿನ್ನೆ ಕೇಂದ್ರ ಸಚಿವ ಸದಾನಂದಗೌಡರಿಗೆ ಯೋಜನೆ ಕುರಿತು ವಿವರಿಸಿದ್ದಾರೆ. ಬೆಂಗಳೂರಿನ ಎಲ್ಲ ಶಾಸಕರಿಗೂ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಗಳನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.