×
Ad

ಡಾ.ಎಚ್.ಸಿ ಮಹದೇವಪ್ಪ ಭಾವಿ ಸಿಎಂ ಎಂದ ಸಚಿವ ರೋಶನ್‌ ಬೇಗ್‌

Update: 2016-10-23 14:39 IST

ಮೈಸೂರು, ಅ.22: ನಂಜನಗೂಡಿ ನಲ್ಲಿ  ಇಂದು ನಡೆದ ಜಿಲ್ಲಾ ಕಾಂಗ್ರೆಸ್‌ ಸಮಾವೇಶದಲ್ಲಿ  ಸಚಿವ ರೋಶನ್‌ ಬೇಗ್‌ ಅವರು  ಸಚಿವ ಡಾ.ಎಚ್‌.ಸಿ ಮಹದೇವಪ್ಪ ಅವರನ್ನು ಭಾವಿ ಮುಖ್ಯ ಮಂತ್ರಿ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗುದ್ದು ನೀಡಿದ್ದಾರೆ.

ಎರಡು ಬಾರಿ ಡಾ.ಮಹದೇವಪ್ಪರನ್ನು ಭಾವಿ ಮುಖ್ಯ ಮಂತ್ರಿ ಎಂದು ರೋಶನ್‌ ಬೇಗ್‌ ಸಂಬೋಧಿಸಿದರು. ಆದರೆ ಅವರ ಮಾತು ಮುಗಿದ ಬಳಿಕ ಸಚಿವ ಡಾ.ಮಹದೇವಪ್ಪ ಅವರು ರೋಶನ್‌ ಬೇಗ್‌ ಕೈಕುಲುಕಿ ಸಂತಸ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಂಸದ ಧೃವ ನಾರಾಯಣ್‌ ಅವರು  ಮಾತನಾಡಿ"ಜೆಡಿಎಸ್ ನಲ್ಲಿ ತಟಸ್ಥರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ಕಾಂಗ್ರೆಸ್‌ಗೆ  ಬಂದಿದ್ದರು.  ಹಲವು  ಅಧಿಕಾರಗಳನ್ನು  ಅನುಭವಿದರು. ಕಳೆದ ಒಂದು ವರ್ಷದಿಂದ ಅನಾರೋಗ್ಯದಲ್ಲಿದ್ದ ಅವರ ಎಲ್ಲ ಕೆಲಸಗಳನ್ನು ನಾವು ಮಾಡಿದ್ದೇವು. ಪಕ್ಷ ಬಿಡದಂತೆ ನಾವು ಹಲವು ಬಾರಿ ಮಾಡಿದೆವು. ಹಿರಿಯ ಮುತ್ಸದ್ದಿಯಾಗಿರುವ ಶ್ರೀನಿವಾಸ್‌ ಪ್ರಸಾದ್‌ ನಡೆ ಸರಿಯಿಲ್ಲ ” ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News