‘ಕೋಟ್ಯಂತರ ರೂ. ಹಣದ ಬಗ್ಗೆ ಯಡಿಯೂರಪ್ಪಗೆ ಚೆನ್ನಾಗಿ ಗೊತ್ತಿದೆ'
Update: 2016-10-24 13:39 IST
ಬೆಂಗಳೂರು, ಅ.24: ವಿಧಾನ ಸೌಧದ ಆವರಣದಲ್ಲಿ ಇತ್ತೀಚೆಗೆ ಜಪ್ತಿಯಾದ ಕೋಟ್ಯಂತರ ರೂ. ಹಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿರುವ ಮಾಜಿ ಸಿಎಂ ಕುಮಾರ ಸ್ವಾಮಿ ಹೊಸ ಬಾಂಬು ಸಿಡಿಸಿದ್ದಾರೆ.
ವಿಧಾನಸೌಧದ ಆವರಣದ ಬಳಿ ಕಾರಿನಲ್ಲಿ ಜಪ್ತಿ ಮಾಡಲಾಗಿದ್ದ 1.97 ಕೋಟಿ ರೂ. ಬಗ್ಗೆ ಯಡಿಯೂರಪ್ಪರಿಗೆ ಗೊತ್ತಿದ್ದು, ಅವರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರ ಸ್ವಾಮಿ ಆಗ್ರಹಿಸಿದರು.
ವಿಧಾನಸೌಧದ ಬಳಿ ಇತ್ತೀಚೆಗೆ ಕಾರಿನಲ್ಲಿ ಜಪ್ತಿಯಾದ ಕೋಟ್ಯಂತರ ಹಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದರು.