ಈರುಳ್ಳಿ ದರ ಕುಸಿತ: ರೈತರ ಕಣ್ಣಲ್ಲಿ ಕಣ್ಣೀರು
ಬೆಂಗಳೂರು,ಅ.26: ಈರುಳ್ಳಿ ಬೆಲೆ ಕುಸಿತವಾಗಿದ್ದು, ಒಂದು ಕೆಜಿಗೆ ಒಂದು ರೂ. ನಿಂದ 5ರೂ.ಗೆ ಸೀಮಿತಗೊಂಡಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಈರುಳ್ಳಿ ರೈತನ ಕಣ್ಣಿನಲ್ಲಿ ಕಣ್ಣೀರು ತರಿಸಿದೆ.
ಈರುಳ್ಳಿ ಕುಸಿತಕ್ಕೆ ಅನೇಕ ಕಾರಣಗಳಿವೆ. ಈ ಬಾರಿ ಯಥೇಚ್ಛ ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನಗಳಿಂದ ಬಂದಿರುವ ಈರುಳ್ಳಿ ದಾಸ್ತಾನು ಇನ್ನು ಖಾಲಿಯಾಗಿಲ್ಲ. ಮಹಾರಾಷ್ಟ್ರದ ಈರುಳ್ಳಿಯ ಮುಂದೆ ನಮ್ಮ ರಾಜ್ಯದ ಈರುಳ್ಳಿಯ ಗುಣಮಟ್ಟ ಕಡಿಮೆಯಿದೆ. ಕಾವೇರಿ ನದಿ ನೀರು ವಿವಾದದಿಂದ ತಮಿಳುನಾಡು ವ್ಯಾಪಾರಿಗಳು ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಈರುಳ್ಳಿಗೆ ಸರಿಯಾದ ರಫ್ತು ವ್ಯವಸ್ಥೆ ಇಲ್ಲ. ಎಪಿಎಂಸಿಗಳಲ್ಲಿ ಗೋದಾಮುಗಳಿಲ್ಲ. ಈ ಎಲ್ಲಾ ಕಾರಣಗಳಿಂದ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಲಾಗಿದ್ದಾರೆ.
ಎಪಿಎಂಸಿಗಳಲ್ಲಿ ಈರುಳ್ಳಿ ದರ:
ಬೆಂಗಳೂರು 1 ರಿಂದ 5ರೂ., ಹುಬ್ಬಳ್ಳಿ 2 ರಿಂದ 5ರೂ., ದಾವಣಗೆರೆ 2 ರಿಂದ 5ರೂ., ಚಿತ್ರದುರ್ಗ 2 ರಿಂದ 3ರೂ., ಹಾವೇರಿ 1 ರಿಂದ 5ರೂ.,ಮೈಸೂರು 1 ರಿಂದ 5ರೂ., ಧಾರವಾಡ 2 ರಿಂದ 3ರೂ. ಇದೆ. ಚಿಲ್ಲರೆ ಮಾರುಕಟ್ಟೆ ಬೆಲೆ (ಕೆ.ಜಿಗೆ): ಸಣ್ಣ ಈರುಳ್ಳಿ 5 ರಿಂದ 8 ರೂ., ಮಧ್ಯಮ ಗಾತ್ರ ಈರುಳ್ಳಿ 15 ರೂ., ದೊಡ್ಡ ಈರುಳ್ಳಿ 20 ರೂ. ಇದೆ. ಇದೇ ಈರುಳ್ಳಿ ಗ್ರಾಹಕರಿಗೆ ಹಾಪ್‌ಕಾಮ್ಸ್ನಲ್ಲಿ 18 ರೂ., ಬಿಗ್‌ಬಜಾರ್ 19 ರೂ.ಆಗಿದೆ.