×
Ad

ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ

Update: 2016-10-28 22:19 IST

ಮಡಿಕೇರಿ, ಅ.28: ಹೊದ್ದೂರು ಗ್ರಾಮದ ಪಾಲೇಮಾಡುವಿ ನಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳು ಅಗ್ನಿಗಾಹುತಿಯಾದ ಘಟನೆ ನಡೆದಿದೆ.

ಪಾಲೇಮಾಡು ನಿವಾಸಿ ಬಿ.ಎನ್. ಸುಂದರ್ ಅವರ ಗುಡಿಸಲು ಮನೆಯಲ್ಲಿ ಶುಕ್ರವಾರ ಬೆಳಗ್ಗೆ 11:30ರ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮೂರ್ನಾಡು ಪೊಲೀಸ್ ಉಪಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News