×
Ad

ರೈಸ್ ಪುಲ್ಲಿಂಗ್ ವಂಚನೆ: ನಗರಸಭೆ ಸದಸ್ಯನ ಬಂಧನ

Update: 2016-10-31 22:05 IST

ಚಾಮರಾಜನಗರ, ಅ.31: ವ್ಯಕ್ತಿಯೊಬ್ಬರಿಗೆ ರೈಸ್ ಪುಲ್ಲಿಂಗ್ ಕೊಡುತ್ತೇನೆ ಎಂದು ನಂಬಿಸಿ, ಅವರಿಂದ 16 ಲಕ್ಷ ರೂ. ಪಡೆದು ವಂಚನೆ ಮಾಡಿದ ಆರೋಪದ ಮೇಲೆ ನಗರಸಭೆೆ ಸದಸ್ಯನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  ಚಾಮರಾಜನಗರದ ನಗರಸಭೆ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಬಂಧಿತ ಸದಸ್ಯನಾಗಿದ್ದು, ನಂಜುಂಡಸ್ವಾಮಿ ಬೆಂಗಳೂರಿನ ದೇವನಹಳ್ಳಿಯ ದೇವರಾಜ್‌ಎಂಬವರಿಗೆ ರೈಸ್ ಪುಲ್ಲಿಂಗ್ ಕೊಡುತ್ತೇನೆ ಎಂದು ಹೇಳಿ ನಂಬಿಸಿ, ಅದಕ್ಕಾಗಿ 16 ಲಕ್ಷ ರೂ. ಪಡೆದಿದ್ದರು ಎಂದು ದೇವರಾಜ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ನಂಜುಂಡಸ್ವಾಮಿಯನ್ನು ರವಿವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾದೀಶರು ಆರ್.ಪಿ ನಂಜುಂಡಸ್ವಾಮಿ ಅವರನ್ನು ನ.11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News