×
Ad

ಮಾಲೂರು: ಮೂವರು ವಾಹನ ಚೋರರ ಬಂಧನ

Update: 2016-10-31 23:00 IST

ಮಾಲೂರು, ಅ.31: ಟಾಟಾ ಸುಮೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಮಾಸ್ತಿ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಮೂವರು ವಾಹನ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಲೂರು ತಾಲೂಕಿನ ಬನಹಳ್ಳಿ ಗ್ರಾಮದ ಮಂಜುನಾಥ್, ಚಕ್ಕಡಿ ಹೊಸಹಳ್ಳಿ ಗ್ರಾಮದ ಮುನಿರಾಜು, ಕಗ್ಗನೂರು ಗ್ರಾಮದ ಚಿಕ್ಕಅಬ್ಬಯ್ಯಪ್ಪಬಂಧಿತ ಆರೋಪಿಗಳು. ಬಂಧಿತರಿಂದ 25 ಲಕ್ಷ ರೂ. ಮೌಲ್ಯದ ನಾಲ್ಕು ಟಾಟಾ ಸುಮೋ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

  ತಾಲೂಕಿನ ಮಾಸ್ತಿ ಠಾಣೆಯ ಎಸ್ಸೈ ಗಿರೀಶ್‌ಗೌಡ ನೇತೃತ್ವದ ಪೊಲೀಸರ ತಂಡ, ಎಸ್ಪಿ ದಿವ್ಯಾಗೋಪಿನಾಥ್, ಡಿವೈಎಸ್ಪಿ ಅಬ್ದುಲ್ ಸತ್ತಾರ್ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ವಾಹನ ಚೋರರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News