21 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ
ಬೆಂಗಳೂರು, ನ.2: ಸಚಿವ ಸಂಪುಟ ಪುನಾರ್ರಚನೆ ಸಂದರ್ಭದಲ್ಲಿ ಎದುರಾಗಿದ್ದ ಶಾಸಕರ ಅತೃಪ್ತಿಯನ್ನು ಶಮನ ಮಾಡಲು ಹರಸಾಹಸ ಪಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, 21 ಶಾಸಕರಿಗೆ ಪ್ರಮುಖವಾದ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ ಹೊಸದಿಲ್ಲಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸತತವಾಗಿ ಸಭೆಗಳನ್ನು ನಡೆಸಿ ಸಮಾಲೋಚನೆ ನಡೆಸಿದ ಬಳಿಕ 21 ಶಾಸಕರು ಹಾಗೂ 70 ಕಾರ್ಯಕರ್ತರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನೀಡುವ ಪಟ್ಟಿಯನ್ನು ಅಂತಿಮಗೊಳಿಸಿ, ಹೈಕಮಾಂಡ್ ಒಪ್ಪಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಬಲ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಆರ್.ವಿ.ದೇವರಾಜ್, ಎಂಟಿಬಿ ನಾಗರಾಜ್, ಬಿ.ಆರ್.ಯಾವಗಲ್, ಶಿವಾನಂದ ಎಸ್.ಪಾಟೀಲ್ ಸೇರಿದಂತೆ 21 ಶಾಸಕರಿಗೆ ಮಣೆ ಹಾಕಲಾಗಿದೆ.
ನಿಗಮ-ಮಂಡಳಿಗಳ ಅಧ್ಯಕ್ಷರ ವಿವರ
ರಾಜ್ಯ ಗೃಹ ಮಂಡಳಿ-ಮಾಲೀಕಯ್ಯ ಗುತ್ತೇದಾರ್,
ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ-ಆರ್.ವಿ.ದೇವರಾಜ್,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) -ಕೆ.ವೆಂಕಟೇಶ್,
ರಾಜ್ಯ ಭೂ ಸೇನಾ ನಿಗಮ (ಕೆಆರ್‌ಐಡಿಎಲ್)-ರಾಜಶೇಖರ ಬಿ.ಪಾಟೀಲ್.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ- ಎನ್. ನಾಗರಾಜ್(ಎಂಟಿಬಿ),
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ-ಫಿರೋಝ್ ಸೇಠ್,
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ-ಕೆ.ಗೋಪಾಲ ಪೂಜಾರಿ,
ರಾಜ್ಯ ರಸ್ತೆ ಅಭಿವೃದ್ಧಿ ನಿಗಮ-ಸಿ.ಪುಟ್ಟರಂಗಶೆಟ್ಟಿ,
ರಾಜ್ಯ ಉಗ್ರಾಣ ನಿಗಮ-ರಹೀಂಖಾನ್.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ-ಕೆ.ವಸಂತ ಬಂಗೇರ,
ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತ-ಬಿ.ಆರ್.ಯಾವಗಲ್,
ರಾಜ್ಯ ರೇಷ್ಮೆ ಉದ್ಯಮಗಳ ನಿಗಮ-ಎಂ.ಕೆ.ಸೋಮಶೇಖರ್,
ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ-ಜಿ.ಎಸ್.ಪಾಟೀಲ್.
ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ-ಶಿವಾನಂದ ಎಸ್.ಪಾಟೀಲ್,
ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್)-ಹಂಪನಗೌಡ ಬಾದರ್ಲಿ,
ರಾಜ್ಯ ಸಾಬೂನು ಮತ್ತು ಮಾರ್ಜಕ ನಿಯಮಿತ-ಎಚ್.ಆರ್.ಅಲಗೂರ(ರಾಜು),
ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ(ಕಿಯೋನಿಕ್ಸ್)-ಡಿ.ಸುಧಾಕರ್
ರಾಜ್ಯ ಗಡಿ ಪ್ರದೇಶಾಭಿವೃದ್ಧಿ ನಿಗಮ-ಬಾಬುರಾವ್ ಚಿಂಚನಸೂರ್,
ಕರಾವಳಿ ಅಭಿವೃದ್ಧಿ ಪ್ರಾಧಿಕಾರ-ಶಾರದಾ ಮೋಹನ್ ಶೆಟ್ಟಿ,
ಡಾ.ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಶಿಫಾರಸ್ಸುಗಳ ಅನುಷ್ಠಾನ ಸಮಿತಿ- ಎನ್.ವೈ.ಗೋಪಾಲಕೃಷ್ಣ,
ರಾಯಚೂರಿನ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ(ಕಾಡಾ)-ಜಿ.ಹಂಪಯ್ಯನಾಯಕ್ ಬಲ್ಲಟಗಿ
ಎಲ್ಲ ನಿಗಮ, ಮಂಡಳಿ, ಪ್ರಾಧಿಕಾರ, ಕಂಪೆನಿ, ಸಂಸ್ಥೆ, ಸಮಿತಿ, ಆಯೋಗದ ಅಧ್ಯಕ್ಷರಿಗೆ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಲಾಗಿದೆ.
ಅಲ್ಪಸಂಖ್ಯಾತರ ಆಯೋಗಕ್ಕೆ ನಸೀರ್ ಅಹ್ಮದ್ ಅಧ್ಯಕ್ಷ
ಬೆಂಗಳೂರು, ನ.2: ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಮಾಜಿ ಸಚಿವ ನಸೀರ್ ಅಹ್ಮದ್‌ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೆಎಂಡಿಸಿ: ಉಡುಪಿ ಜಿಲ್ಲೆಯ ಬ್ರಹ್ಮಗಿರಿಯ ಎಂ.ಎ.ಗಫೂರ್‌ರನ್ನು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಎಸ್.ಇ.ಸುಧೀಂದ್ರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇಮಕ
ಬೆಂಗಳೂರು, ನ. 2: ಹಿರಿಯ ಸಾಹಿತಿ ಹಾಗೂ ಕವಿ ಡಾ.ಎಲ್.ಹನುಮಂತಯ್ಯ ರಾಜೀನಾಮೆಯಿಂದ ತೆರವಾಗಿದ್ದ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಅಧ್ಯಕ್ಷರನ್ನಾಗಿ ಸಾಹಿತಿ ಪ್ರೊ.ಎಸ್. ಜಿ.ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.