ರುದ್ರೇಶ್ ಕೊಲೆ ಪ್ರಕರಣ; ಪಿಎಫ್ ಐ ಜಿಲ್ಲಾ ಮುಖಂಡನ ಸೆರೆ
Update: 2016-11-03 12:18 IST
ಬೆಂಗಳೂರು, ನ.3: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಆರೋಪಕ್ಕೆ ಸಂಬಂಧಿಸಿ ಓರ್ವನನ್ನು ಕಮರ್ಷಿಯಲ್ ಸ್ಟ್ರೀಟ್ ಪೋಲಿಸರು ಪಾಪ್ಯುಲರ್ ಫ್ರೆಂಟ್‌ನ ಜಿಲ್ಲಾ ಸಮಿತಿಯ ಅಧ್ಯಕ್ಷ ಅಸೀಂ ಷರೀಫ್ ಎಂಬವರನ್ನು ಬಂಧಿಸಿದ್ದಾರೆ
ಇದರೊಂದಿಗೆ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
ಅಕ್ಟೋಬರ್ 16ರಂದು ಮಧ್ಯಾಹ್ನ ಆರ‍್ ಎಸ್ ಎಸ್ ಪಥ ಸಂಚಲನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ರುದ್ರೇಶ್ ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.