×
Ad

ನಾಯಕತ್ವ ಗುಣ ಬೆಳೆಸಿಕೊಳಿ್ಳ: ಮೋಟಮ್ಮ

Update: 2016-11-03 22:10 IST

ಚಿಕ್ಕಮಗಳೂರು, ನ.3: ಕಾರ್ಯಕರ್ತರು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುವ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಎಂಎಲ್ಸಿ ಡಾ.ಮೋಟಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ವಸ್ತಾರೆ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜನ ಪರ ಶಾಸನಗಳನ್ನು ತರುವ ಮೂಲಕ ಸ್ತ್ರೀ ಶಕ್ತಿ, ಅನ್ನ ದಾಸೋಹ, ಯಶಸ್ವಿನಿಯಂತಹ ಮುಂತಾದ ಸೇವೆಗಳನ್ನು ಜಾರಿಗೆ ತಂದಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಮಾತನಾಡಿ, ಚುನಾವಣೆ ಇನ್ನೂ 2 ವರ್ಷವಿರುವಾಗಲೇ ಪಕ್ಷ ಸಂಟನೆಗೆ ಮಹತ್ವ ಕೊಡುವ ಕೆಲಸ ಆರಂಭಿಸಿದೆ. ನಿರಂತರವಾಗಿ ಪಕ್ಷದ ಚಟುವಟಿಕೆಗಳು ಹಿಂದಿಗಿಂತಲೂ ಹೆಚ್ಚಾಗಲಿದ್ದು ಕಾರ್ಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಆಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಕೃಷ್ಣೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಅಗತ್ಯವಿದ್ದರೆ ಹೊಸ ಪದಾಧಿಕಾರಿಗಳನ್ನು ನೇಮಿಸಿ ಬೂತ್ ಮಟ್ಟದವರೆಗೆ ಪಕ್ಷ ಸಂಘಟಿಸಲು ಮುಂದಾಗೋಣ ಎಂದರು. ಹೋಬಳಿ ಅಧ್ಯಕ್ಷ ವಸ್ತಾರೆ ಸುಬ್ಬೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಮಹೇಶ್, ಬಿ.ಎಂ. ಸಂದೀಪ್, ಎಂ.ಸಿ. ಶಿವಾನಂದಸ್ವಾಮಿ, ನಸರತ್, ಕೆ.ಟಿ. ಮಂಜುನಾಥ್. ಸಿದ್ದರಾಜು ಅವರುಗಳು ವೇದಿಕೆಯಲ್ಲಿದ್ದರು.

ಯುವ ಮುಖಂಡ ನಿಂಗೇಗೌಡ ಸ್ವಾಗತಿಸಿ, ವಂದಿಸಿದರು.

ಮೂಡಿಗೆರೆ: ಬಣಕಲ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮೂಡಿಗೆರೆ, ನ.3: ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಣಕಲ್ ಹೋಬಳಿ ಕೇಂದ್ರದಲ್ಲಿ ನಡೆಸಲು ಗುರುವಾರ ಬಣಕಲ್‌ನ ಗ್ರಾಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಬಣಕಲ್‌ನಲ್ಲಿ ಕನ್ನಡ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ತಾಲೂಕು ಬರಪೀಡಿತ ಪ್ರದೇಶ ಆಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಬೇಕು ಎಂದರು.

ಬಣಕಲ್ ಹೋಬಳಿಯ ಕಸಾಪ ಅಧ್ಯಕ್ಷ ಮೋಹನ್‌ಕುಮಾರ್‌ಶೆಟ್ಟಿ ಮಾತನಾಡಿ, ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸಮ್ಮೇಳನದಲ್ಲಿ ಸಾಂಕೇತಿಕವಾಗಿ ಆಚರಿಸುತ್ತೇವೆ. ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಬಣಕಲ್ ಗ್ರಾಂಪಂ ಅಧ್ಯಕ್ಷೆ ಸುಮತಿ ಮಾತನಾಡಿ, ಗ್ರಾಪಂ ವತಿಯಿಂದ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.

ವಿದ್ಯಾಭಾರತಿ ಶಾಲೆಯ ಸಮಿತಿ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ಮಾತನಾಡಿ, ಸಾಹಿತ್ಯ ಸಮ್ಮೇಳನ ನಡೆಸಲು ಕಾಫಿ ಬೆಳೆಗಾರರು, ಸಂಘ ಸಂಸ್ಥೆ, ಶಾಲಾ ಸಮಿತಿ, ಕೃಷಿಕರು, ವರ್ತಕರು, ಸ್ಥಳೀಯ ರಾಜಕೀಯ ಪ್ರತಿನಿಧಿಗಳು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ನಡೆಸುವುದು ಸೂಕ್ತ ಎಂಬ ಸಲಹೆ ನೀಡಿದರು.

 ಸಭೆಯಲ್ಲಿ ಮೇಘರಾಜ್, ಜೇಸಿಐನ ನಿರ್ದೇಶಕ ಮೋಹನ್ ರಾಜಣ್ಣ, ತಾಲೂಕು ಕಸಾಪ ಕಾರ್ಯದರ್ಶಿ ಡಿ.ಕೆ.ಲಕ್ಷ್ಮಣ್ ಗೌಡ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ, ಕೃಷಿ ಪತ್ತಿನ ಬ್ಯಾಂಕ್‌ನ ನಿರ್ದೇಶಕ ಎ.ಆರ್. ಅಭಿಲಾಷ್, ಕೃಷಿ ಅಧಿಕಾರಿಗಳಾದ ಶೈಲಜಾ, ಪುಷ್ಪಾ, ಶಿಕ್ಷಕರಾದ ಶೇಖರಪ್ಪ, ಮತ್ತಿಕಟ್ಟೆ ಪೂರ್ಣೇಶ್, ಸುಬ್ರಾಯಗೌಡ, ಬಿ.ಎಸ್.ವಿಕ್ರಮ್, ದಿಲ್‌ದಾರ್‌ಬೇಗಂ, ಅಹ್ಮದ್‌ಬಾವಾ, ರವಿಪಟೇಲ್ ಕೂವೆ, ನಜರೆತ್ ಶಾಲೆಯ ಲವಕುಮಾರ್, ಕಾಂಗ್ರೆಸ್ ಕಾರ್ಯದರ್ಶಿ ಉಮ್ಮರ್, ಘೋಸ್ ಮೊಯಿದಿನ್, ಎ.ಸಿ.ಆಯೂಬ್, ಜೇಸಿಐನ ಅಧ್ಯಕ್ಷ ಬಗ್ಗಸಗೋಡು ಕವೀಶ್ ಉಪಸ್ಥಿತರಿದ್ದರು.

ವಿದ್ಯಾ ಭಾರತಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕಸಾಪ ಕಾರ್ಯದರ್ಶಿ ವಸಂತ್ ಸ್ವಾಗತಿಸಿದರು. ಪ್ರಮೋದ್ ವಂದಿಸಿದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News