×
Ad

ರಾಹುಲ್ ಗಾಂಧಿ ಬಂಧನ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2016-11-05 22:08 IST

ಚಿಕ್ಕಮಗಳೂರು, ನ.5: ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಯೋಧ ರಾಮ್‌ಕಿಶನ್ ಗ್ರೆವಾಲ್‌ರ ಮೃತದೇಹ ಇರಿಸಿದ್ದ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಯತ್ನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪೊಲೀಸರು ದಸ್ತಗಿರಿ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದಭರ್ದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯ ಕುಮಾರ್ ಮಾತನಾಡಿ, ಕೇಂದ್ರ ಸರಕಾರದ ಮೇಲೆ ತೀಕ್ಷ್ಣ ವಾಗ್ದಾಳಿ ನಡೆಸಿ 2013ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವು ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಗೆ ಚಾಲನೆ ನೀಡಿದೆ. ಇದರ ಬಗ್ಗೆ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಇದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಆಶ್ವಾಸನೆ ಕೊಟ್ಟು ಇಲ್ಲಿಯವರೆಗೆ ಇದರ ಪ್ರಯೋಜನವನ್ನು 1 ಲಕ್ಷ ಮಾಜಿ ಸೈನಿಕರಿಗೆ ಕೊಡದೇ ಇದ್ದುದರಿಂದ ಇದರ ಬಗ್ಗೆ ಮನನೊಂದು ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಈ ದೇಶದ ದುರಂತ ಎಂದು ಹೇಳಿದರು.

ಒಬ್ಬ ಜವಾಬ್ದಾರಿ ರಕ್ಷಣಾ ಸಚಿವರಾಗಿ ವಿ.ಕೆ.ಸಿಂಗ್, ಆತ್ಮಹತ್ಯೆ ಮಾಡಿಕೊಂಡ ರಾಮ್ ಕಿಶನ್ ಗ್ರೆವಾಲ್‌ಗೆ ಮಾನಸಿಕ ಕಾಯಿಲೆ ಇರಬಹುದು ಎಂಬ ಬಾಲಿಶಃ ಹೇಳಿಕೆ ನೀಡುವ ಮೂಲಕ ಮಾಜಿ ಸೈನಿಕನ ಗೌರವಕ್ಕೆ ಅಗೌರವವನ್ನು ಸೂಚಿಸಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು. ಮೋದಿ ಸರಕಾರಕ್ಕೆ ಮಾಜಿ ಸೈನಿಕರ ಮೇಲೆ ವಿಶ್ವಾಸವಿದ್ದರೆ ಈ ಕೂಡಲೇ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಊರಾಳ್, ಅಲ್ಪಸಂಖ್ಯಾತರ ಅಧ್ಯಕ್ಷ ನಿಸಾರ್ ಅಹ್ಮದ್, ಉಪಾಧ್ಯಕ್ಷ ಶಾಂತೇಗೌಡ ಮಾತನಾಡಿದರು. ಮೃತ ಮಾಜಿ ಸೈನಿಕ ರಾಮ್ ಕಿಶನ್ ಗ್ರೆವಾಲ್‌ರ ಆತ್ಮಕ್ಕೆ ಒಂದು ನಿಮಿಷ ವೌನ ಆಚರಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಕೆಂಪನಳ್ಳಿ ಮಂಜುನಾಥ್, ಉಪಾಧ್ಯಕ್ಷ ಮುಹಮ್ಮದ್ ಅಕ್ಬರ್, ಕಾರ್ಯದರ್ಶಿ ಕೆ.ವಿ ಮಂಜುನಾಥ್, ಹೆಬ್ಬಳ್ಳಿ ನಾಗೇಶ್, ಶ್ರೀನಿವಾಸ್ ದೇವಾಂಗ, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಡು, ಇಂದಾವರ ಲೋಕೇಶ್, ಎಸ್.ಸಿ. ಸೆಲ್ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಸೇವಾದಳ ಅಧ್ಯಕ್ಷ ಆನಂದ, ನಗೀನಾ ಬಾನು, ಫಾತಿಮಾ, ರುಕ್ಸಾನಾ, ಸಿ.ಡಿ.ಎ ಸದಸ್ಯರಾದ ಓಂಕಾರೇಗೌಡ, ಧರ್ಮಯ್ಯ, ಸಲೀಮ್ ಸೇಟ್, ಹಿರೇಮಗಳೂರು ರಾಮಚಂದ್ರ, ನಗರಸಭೆ ಸದಸ್ಯರಾದ ಸಂದೇಶ್, ರೂಭಿ, ಲಕ್ಷ್ಮಣ್, ಕಡೂರು, ಬೀರೂರು ಬ್ಲಾಕ್ ಅಧ್ಯಕ್ಷರಾದ ಚಂದ್ರಪ್ಪ, ವಿನಾಯಕ, ಹೊನ್ನೇಶ್, ವಾಣಿ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News