ಸುಂಟಿಕೊಪ್ಪದಲ್ಲಿ ಪೊಲೀಸ್ ಪಥ ಸಂಚಲನ
Update: 2016-11-05 22:12 IST
ಸುಂಟಿಕೊಪ್ಪ, ನ.5: ಸುಂಟಿಕೊಪ್ಪಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಸಾರ್ವಜನಿಕರಲ್ಲಿ ರಕ್ಷಣೆ ಹಾಗೂ ಸಮಾಜ ಘಾತುಕ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಶನಿವಾರ ಬೆಳಗ್ಗೆ ಪಟ್ಟಣದಲ್ಲಿ ಪಥ ಸಂಚಲನ ನಡೆಸಲಾಯಿತು.
ಸುಂಟಿಕೊಪ್ಪದಲ್ಲಿ ತಲೆಹೊರೆ ಕಾರ್ಮಿಕ ಸಂಘದ ವತಿಯಿಂದ ಆಯೋಜಿತಗೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನ.10 ರಂದು ಜಿಲ್ಲೆಯಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುವ ದಿಸೆಯಲ್ಲಿ ಪಥಸಂಚಲನ ನಡೆಸಲಾಯಿತು. ಠಾಣಾಧಿಕಾರಿ ಅನೂಪ್ ಮಾದಪ್ಪಹಾಗೂ ಸಿಬ್ಬಂದಿ ಸಂಪೂರ್ಣ ರಕ್ಷಾ ಕವಚಗಳೊಂದಿಗೆ ಪಥ ಸಂಚಲನ ನಡೆಸಿದರು.