ಭ್ರಷ್ಟಾಚಾರ ಮುಕ್ತ ಭಾರತ ಎಲ್ಲರ ಸಂಕಲ್ಪವಾಗಲಿ: ಎಸ್ಪಿ ಅಣ್ಣಾಮಲೈ
Update: 2016-11-05 22:20 IST
ಚಿಕ್ಕಮಗಳೂರು, ನ.5: ಪ್ರತಿಯೊಬ್ಬರೂ ಸರಳಜೀವನ ಮತ್ತು ಉದಾತ್ತ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕತೆಯ ಮೂಲಕ ಭ್ರಷ್ಟಾಚಾರವನ್ನು ದೂರವಿಡಬಹುದು. ಭ್ರಷ್ಟಾಚಾರ ಮುಕ್ತ ಭಾರತ ಎಲ್ಲರ ಸಂಕಲ್ಪವಾಗಲಿ ಎಂದು ಎಸ್ಪಿ ಕೆ.ಅಣ್ಣಾಮಲೈ ಹೇಳಿದರು.
ಅವರು, ಶನಿವಾರ ನಗರದ ಕಾರ್ಪೊರೇಷನ್ ಬ್ಯಾಂಕ್ ಹಮ್ಮಿಕೊಂಡಿದ್ದ ಬ್ಯಾಂಕ್ ಸಪ್ತಾಹ ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ನಾಗರಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಪ್ರತಿಯೊಬ್ಬರೂ ಒಗ್ಗೂಡಿ ಪ್ರಾಮಾಣಿಕತೆಯಿಂದ ಕಾಯರ್ರ್ನಿರ್ವಹಿಸಿದಾಗ ದೇಶದ ಉನ್ನತಿ ಸಾಧ್ಯ. ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಅಭಿವೃದ್ಧಿಗೆ ಕಂಟಕವಾಗಿರುವ ಭ್ರಷ್ಟಾಚಾರದ ವಿರುದ್ಧ ಸಾಮಾನ್ಯ ಜನರು ಜಾಗೃತರಾಗಬೇಕು. ದೇಶದ ಹಿತವನ್ನು ಕಾಪಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಆದ್ಯ ಕರ್ತವ್ಯ ಹಾಗೂ ಭ್ರಷ್ಟಾಚಾರ ಮುಕ್ತ ಭಾರತ ಎಲ್ಲರ ಸಂಕಲ್ಪವಾಗಲಿ ಎಂದು ತಿಳಿಸಿದರು.