ಜೆಎನ್ ಯು ಕ್ಯಾಂಪಸ್ ನಲ್ಲಿ ಶಸ್ತ್ರಾಸ್ತ್ರ ಪತ್ತೆ
Update: 2016-11-07 11:23 IST
ಹೊಸದಿಲ್ಲಿ, ನ.7: ಜವಾಹರಲಾಲ್ ನೆಹರೂ ವಿವಿ ಕ್ಯಾಂಪಸ್ ನಲ್ಲಿ ಶಸ್ತ್ರಾಸ್ತ್ರ ತುಂಬಿದ ಬ್ಯಾಗೊಂದು ಇಂದು ಬೆಳಗ್ಗೆ ಪತ್ತೆಯಾಗಿದೆ.
ವಿವಿ ಕ್ಯಾಂಪಸ್‌ನ ಉತ್ತರ ಗೇಟ್ ನ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರ ತುಂಬಿದ ಬ್ಯಾಗ್‌ನಲ್ಲಿ ಎರಡು ನಾಡ ಪಿಸ್ತೂಲ್ ಮತ್ತು ಏಳು ಕಾಟ್ರೇಜ್ ಗಳು ಪತ್ತೆಯಾಗಿದೆ. ದಿಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.