ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು: ಆಂಜನೇಯ
Update: 2016-11-08 12:57 IST
ರಾಯಚೂರು, ನ.8: ‘‘ಕನ್ನಡ ಚಿತ್ರರಂಗದ ಇಬ್ಬರು ಯುವ, ಪ್ರತಿಭಾವಂತ ಖಳ ನಟರು ಸಾವನ್ನಪ್ಪಿರುವ ಘಟನೆ ನನಗೆ ತುಂಬಾ ನೋವು ತಂದಿದೆ. ಈ ಘಟನೆಯ ಹಿಂದೆ ಚಿತ್ರ ತಂಡದ ನಿರ್ಲಕ್ಷತನ ಎದ್ದು ಕಾಣುತ್ತಿದೆ. ಮೃತ ಪಟ್ಟ ಇಬ್ಬರು ಯುವಕರು ಬಡ ಕುಟುಂಬದಿಂದ ಬಂದವರು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಎಚ್. ಆಂಜನೇಯ ಭರವಸೆ ನೀಡಿದ್ದಾರೆ.
ರಾಯಚೂರು ಪ್ರವಾಸದಲ್ಲಿರುವ ಸಚಿವರು, ಬೆಂಗಳೂರಿನ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಸೋಮವಾರ ‘ಮಾಸ್ತಿ ಗುಡಿ’ ಕನ್ನಡ ಚಿತ್ರದ ಸಾಹಸಮಯ ದೃಶ್ಯದ ಶೂಟಿಂಗ್ ವೇಳೆ ನಡೆದ ದುರ್ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದರು.