ಖಳ ನಟ ಉದಯ್ ಮೃತದೇಹ ಕೊನೆಗೂ ಪತ್ತೆ
Update: 2016-11-09 16:38 IST
ಬೆಂಗಳೂರು, ನ.9: ‘ಮಾಸ್ತಿ ಗುಡಿ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‌ನಿಂದ ತಿಪ್ಪನಗೊಂಡನಹಳ್ಳಿಯ ಜಲಾಶಯಕ್ಕೆ ಹಾರಿ ನಾಪತ್ತೆಯಾಗಿದ್ದ ನಟ ಉದಯ್ ಮೃತದೇಹ ಕೊನೆಗೂ ಪತ್ತೆಯಾಗಿದೆ.
ಉದಯ್ ಪಕ್ಕೆಲುಬಿಗೆ ಮೀನು ಕಚ್ಚಿದ ಗಾಯವಾಗಿದ್ದು, ಇನ್ನುಳಿದಂತೆ ಯಾವುದೇ ಗಾಯವಾಗಿಲ್ಲ. ಉದಯ್ ಬಿದ್ದ ಜಾಗ 60 ಅಡಿ ಆಳವಿತ್ತು.
ಉದಯ್ ಮೃತದೇಹ ಹೆಲಿಕಾಪ್ಟರ್‌ನಿಂದ ಹಾರಿದ ಜಾಗದಲ್ಲೇ ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಮತ್ತೊಬ್ಬ ನಟ ಅನಿಲ್‌ನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸೋಮವಾರ ಮಧ್ಯಾಹ್ನ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ಜಲಾಶಯಕ್ಕೆ ಹಾರಿ ನಾಪತ್ತೆಯಾಗಿದ್ದ ಉದಯ್ ಮೃತದೇಹ ಪತ್ತೆ ಹಚ್ಚುವಲ್ಲಿ ಶೋಧನಾ ತಂಡ ಯಶಸ್ವಿಯಾಗಿದೆ.