×
Ad

ಅರಕಲಗೂಡುವಿನಲ್ಲಿ ಬೋರ್‌ವೆಲ್‌ ಲಾರಿ ಪಲ್ಟಿ; ಐವರು ಕಾರ್ಮಿಕರು ಸಾವು

Update: 2016-11-12 09:42 IST

ಹಾಸನ, ನ.12:  ಇಲ್ಲಿನ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ಬೋರ್‌ವೆಲ್‌ ಲಾರಿಯೊಂದು ಪಲ್ಟಿ ಹೊಡೆದ ಪರಿಣಾಮವಾಗಿ  ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಇಂದು  ನಡೆದಿದೆ.
ಮೃತಪಟ್ಟವರನ್ನು ಜಾರ್ಖಂಡ್ ಮೂಲದ ಅನುತ್, ಮುಚಿರಾಮ್, ಭೀಮ್ ಸಿಂಗ್, ಪುದುರಾಮ್ ಹಾಗೂ ಅನಿಲ್ ಮಾತು ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗಿನ ಜಾವ 4.30ರ ಹೊತ್ತಿಗೆ ಬೋರ್ ವೆಲ್  ಲಾರಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿ ಒಟ್ಟು ಏಳು ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News