ಚಿಕ್ಕಮಗಳೂರಿನಲ್ಲಿ 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ..!
ಚಿಕ್ಕಮಗಳೂರು, ನ.12:ಇದೀಗ ಸರಕಾರ ಹೊರ ತಂದಿರುವ 2 ಸಾವಿರ ರೂ. ಮುಖಬೆಲೆಯ ನೋಟನ್ನು ಬಹುತೇಕ ಮಂದಿ ಇನ್ನೂ ನೋಡುವುದಕ್ಕಿಂತ ಮೊದಲೇ ಖದೀಮರು ಎರಡು ಸಾವಿರ ರೂ.ಗಳ ಜೆರಾಕ್ಸ್ ನೋಟು ತಯಾರಿಸುವ ಕಡೆಗೆ ಗಮನ ಹರಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ.
ಇಂದು ಬೆಳಗಿನ ಜಾವ ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರಿ ಅಶೋಕ್ ಎಂಬುವರಿಗೆ ಎರಡು ಸಾವಿರ ರೂ.ಗಳ ಜೆರಾಕ್ಸ್ ನೋಟು ಸಿಕ್ಕಿದೆ ಎಂದು ಟಿವಿ ಚಾನಲ್ ಗಳು ವರದಿ ಮಾಡಿದೆ.
ಅಶೋಕ್ ಬೆಳಗ್ಗೆ ಚಾ ಕುಡಿಯಲು ಹೋದಾಗ ಅವರ ಕೆಲಸದ ಹುಡುಗನಿಗೆ ಯಾರೋ ಈರುಳ್ಳಿ ಖರೀದಿಸಿ ಈ ನೋಟನ್ನು ನೀಡಿ ಹೋಗಿದ್ದಾರೆ.
ಅಶೋಕ್ ಅವರು ನೋಡಿದ ಕೂಡಲೇ ಇದು ಖೋಟಾ ನೋಟು ಎಂಬ ವಿಚಾರ ಅವರಿಗೆ ಮನವರಿಕೆಯಾಗಿದೆ.ಎರಡು ಸಾವಿರ ರೂ. ನೋಟಿನ ಕಲರ್ ಜೆರಾಕ್ಸ್ ನಂತೆ ಕಂಡು ಬಂದಿದೆ.
ಈ ನೋಟಿನ ಬಾರ್ಡರ್ ನಲ್ಲಿ ಕತ್ತರಿಯಿಂದ ಕತ್ತರಿಸಿರೋದು ಕಾಣ್ತಿದೆ. ನೋಟಿನ ಸೈಡ್ ಎಡ್ಜ್ ನಲ್ಲಿ ಇರಬೇಕಾದ 7 ಗೆರೆಗಳು ಇಲ್ಲ. ನೋಟನ್ನು ಪರಿಶೀಲಿಸಿದಾಗ ಅಸಲಿ ನೋಟಿನ ಜೆರಾಕ್ಸ್ ಪ್ರಿಂಟ್ ಮಾಡಿರುವ ಸಾಧ್ಯತೆ ಕಂಡು ಬಂದಿದೆ. ಈ ನೋಟು ನೋಡಿ ಜನ ಸಾಮಾನ್ಯರು ಗಾಬರಿಯಾಗಿದ್ದಾರೆ.