ನೋಟುಗಳ ಗಲಾಟೆಯ ನಡುವೆ ಮುಂದುವರಿದ ಕಳ್ಳರ ಕೈಚಳಕ
Update: 2016-11-13 10:56 IST
ಕೋಲಾರ, ನ.13: ಒಂದೆಡೆ ಜನ 500, 1000 ರೂ. ಮುಖಬೆಲೆ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‌ಗಳ ಬಾಗಿಲಲ್ಲಿ ನಿಂತು ಕಾಯುತ್ತಿದ್ದರೆ, ಮತ್ತೊಂದೆಡೆ, ಕಳ್ಳರು ನೋಟುಗಳ ಬಗ್ಗೆ ಚಿಂತಿಸದೇ ತಮ್ಮ ಕೈಚಳಕವನ್ನು ತೋರಿಸುವುದನ್ನು ಮುಂದುವರಿಸಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿ ಗೇಟ್ ಬಳಿಯಲ್ಲಿರುವ ರಸಗೊಬ್ಬರದ ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು 2.10 ಲಕ್ಷ ರೂ. ನಗದು ಹಣ ಕದ್ದು ಪರಾರಿಯಾಗಿದ್ದಾರೆ.
ಅಂಗಡಿಯು ರಾಮನಾಥ ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.