ಹಣಕ್ಕಾಗಿ ಜನಸಾಮಾನ್ಯರ ಪರದಾಟ ಮುಂದುವರಿಕೆ
Update: 2016-11-13 11:40 IST
ಬೆಂಗಳೂರು, ನ.13: ನೋಟುಗಳ ವಿನಿಮಯಕ್ಕಾಗಿ ಜನಸಾಮಾನ್ಯರ ಪರದಾಟ ರಜಾದಿನವಾದ ರವಿವಾರವೂ ಮುಂದುವರಿದಿದೆ.
ಗರ್ಭೀಣಿ ಹೆಂಗಸರು, ವೃದ್ಧ-ವೃದ್ಧೆಯರು ಸೇರಿದಂತೆ ಲಕ್ಷಾಂತರ ಜನರು ಬೆಳಗ್ಗೆ 6 ಗಂಟೆಗೆ ಉಪಹಾರ ಸೇವಿಸದೇ ಬ್ಯಾಂಕ್‌ನ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ರವಿವಾರವೂ ರಾಜ್ಯದೆಲ್ಲೆಡೆ ಕಂಡು ಬಂದಿತು. ಕೆಲವು ಬ್ಯಾಂಕ್‌ಗಳಲ್ಲಿ ಒಂದೇ ಕೌಂಟರ್ ಇದ್ದ ಕಾರಣ ಜನ ಸಂದಣಿ ಹೆಚ್ಚಾಗಿತ್ತು. ಬ್ಯಾಂಕ್ ಅಧಿಕಾರಿಗಳು ಇನ್ನಷ್ಟು ಕೌಂಟರ್‌ಗಳನ್ನು ತೆರೆಯಬೇಕೆಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.
ಕೆಲವು ಮಧ್ಯರಾತ್ರಿಯೇ ಎಟಿಎಂನ ಮುಂದೆ ನಿಂತು ಹಣ ಡ್ರಾ ಮಾಡಿಕೊಳ್ಳಲು ಯತ್ನಿಸಿದ್ದಾರೆ. ರಾಜ್ಯದ ಬೆರಳೆಣಿಕೆಯ ಭಾಗದಲ್ಲಿ ಮಾತ್ರ ಎಟಿಎಂ ಕಾರ್ಯನಿರ್ವಹಿಸುತ್ತಿದೆ.