ನೋಟು ವಿನಿಮಯದ ವೇಳೆ ನಕಲಿ ದಾಖಲೆ ಪತ್ತೆ ಹಚ್ಚಿದ ಬ್ಯಾಂಕ್ ಸಿಬ್ಬಂದಿ
Update: 2016-11-13 13:09 IST
ಬೆಂಗಳೂರು, ನ.13: ನಕಲಿ ದಾಖಲೆ ಸಲ್ಲಿಸಿ ನೋಟು ವಿನಿಮಯ ಮಾಡಿದ ಹೊರರಾಜ್ಯದ ಜನರ ಕೃತ್ಯವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ಪತ್ತೆ ಹಚ್ಚಿದ ಘಟನೆ ನಗರದಲ್ಲಿ ನಡೆದಿದೆ.
ನೋಟು ವಿನಿಮಯದ ವೇಳೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಬ್ಯಾಂಕ್ ಸಿಬ್ಬಂದಿ ಜಾರ್ಖಂಡ್, ರಾಜಸ್ಥಾನ, ಬಿಹಾರದ 10 ಜನರು ದಾಖಲೆಗಳ ಕಲರ್ಸ್‌ಝೆರಾಕ್ಸ್ ಪ್ರತಿಯನ್ನು ಸಲ್ಲಿಸಿ ಹಣವನ್ನು ಡ್ರಾಗೊಳಿಸಿದ್ದನ್ನು ಪತ್ತೆ ಹಚ್ಚಿದ್ದು, ಅವರಿಗೆ ಮೂಲ ದಾಖಲೆ ಸಲ್ಲಿಸುವಂತೆ ಸೂಚಿಸಿದೆ. ಹೆಚ್ಚಿನ ವಿಚಾರಣೆಗೂ ಗುರಿಪಡಿಸಿದೆ. ಹೊರರಾಜ್ಯದ 10 ಮಂದಿ ತಲಾ 4 ಸಾವಿರ ರೂ. ಪಡೆಯಲು ಈ ಪ್ರಯತ್ನಕ್ಕೆ ಮುಂದಾಗಿದ್ದರು.