×
Ad

ನಿಷೇಧಿತ ನೋಟು ಸಾಗಿಸುತ್ತಿದ್ದ ಲಾರಿ ಪಲ್ಟಿ

Update: 2016-11-14 11:24 IST

 ರಾಯಚೂರು, ನ.14: ಆರ್‌ಬಿಐಗೆ ಸೇರಿದ್ದ ನಿಷೇಧಿತ ನೋಟುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಸೋಮವಾರ ಬೆಳಗ್ಗೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ನಿಷೇಧಿತ ನೋಟನ್ನು ಹೊತ್ತುಕೊಂಡ ಲಾರಿ ಮೈಸೂರಿನಿಂದ ಕಲಬುರಗಿ ಜಿಲ್ಲೆಯ ವಾಡಿಗೆ ತೆರಳುತ್ತಿದ್ದಾಗ ಸಿಂಧನೂರು ತಾಲೂಕಿನ ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉರುಳಿ ಬಿದ್ದಿದೆ.

ಲಾರಿ ಬಿದ್ದ ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಧಾವಿಸಿ ಲಾರಿಯ ಸುತ್ತಮುತ್ತ ಕಾವಲು ಕಾಯುತ್ತಿದ್ದಾರೆ.

60 ಲಕ್ಷ ರೂ. ಸಾಗಿಸುತ್ತಿದ್ದ ಕಾರು ವಶ: ಹುಬ್ಬಳ್ಳಿಯ ಪೊಲೀಸರು 60 ಲಕ್ಷ ರೂ. ಹಣ ಸಾಗಿಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News