×
Ad

ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ

Update: 2016-11-15 22:59 IST

ಸಾಗರ, ನ.15: ಇಲ್ಲಿನ ಮಾರಿಕಾಂಬಾ ರಸ್ತೆಯಲ್ಲಿ ಮಹೇಶ್ ಹಾಗೂ ಶಶಿಕಲಾ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮಹೇಶ್ ಅವರ ಮನೆಯಲ್ಲಿದ್ದ ಮರದ ಪೀಠೋಪಕರಣ, ವಸ್ತ್ರಗಳು, ಇಲೆಕ್ಟ್ರಾನಿಕ್ ಹಾಗೂ ಇಲೆಕ್ಟ್ರಿಕ್ ವಸ್ತುಗಳು, ಬಂಗಾರದ ಆಭರಣ, ಅಗತ್ಯ ದಾಖಲೆ ಪತ್ರಗಳು, 3 ಲಕ್ಷ ರೂ. ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಶಶಿಕಲಾ ಅವರ ಮನೆಯಲ್ಲಿದ್ದ ಬಟ್ಟೆಗಳು, ದಾಖಲೆ ಪತ್ರಗಳು, ಪೀಠೋಪಕರಣಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News