×
Ad

ಕೋಳಿ ಸಾಂಬಾರು ವಿಳಂಬಕ್ಕೆ ಆಕ್ರೋಶ

Update: 2016-11-15 23:07 IST

ಆರೋಪಿ ನ್ಯಾಯಾಂಗ ವಶಕ್ಕೆ ಆಸ್ಪತ್ರೆಯಲ್ಲಿ ಪತ್ನಿ ಚೇತರಿಕೆ
ಶಿವಮೊಗ್ಗ, ನ. 15: ಚಿಕನ್ ಸಾಂಬಾರು ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಕುಡುಕ ಪತಿಯೊಬ್ಬ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆ ನಗರದ ಹೊರವಲಯ ಸೂಳೇಬೈಲು ಬಡಾವಣೆಯ ಈದ್ಗಾ ನಗರದ 1 ನೆ ತಿರುವಿನಲ್ಲಿ ನಡೆದಿದೆ. ಸುರೇಶ್ (36) ಆರೋಪಿತ ಪತಿ. ಆಶಾರಾಣಿ (33)ದಾಳಿಗೊಳಗಾದ ಪತ್ನಿ ಎಂದು ಗುರುತಿಸಲಾಗಿದೆ.

ಆಶಾರಾಣಿಯನ್ನು ನಗರದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಮಹಿಳಾ ಠಾಣೆ ಸಬ್ ಇನ್‌ಸ್ಪೆಕ್ಟರ್ ಶರಾವತಿ, ತುಂಗಾನಗರ ಪೊಲೀಸ್ ಠಾಣೆ ಪ್ರಭಾರ ಸಬ್ ಇನ್‌ಸ್ಪೆಕ್ಟರ್ ಅನಿತಾಕುಮಾರಿ ನೇತೃತ್ವದ ಪೊಲೀಸ್ ತಂಡ ಆರೋಪಿ ಸುರೇಶ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News