×
Ad

ಎನ್‌ಎಂಪಿಟಿಯಲ್ಲಿ ಗೇಟ್‌ ತುಂಡಾಗಿ ಬಿದ್ದು ಸಿಐಎಫ್‌ಎಫ್‌ ಯೋಧ ಸಾವು

Update: 2016-11-17 09:55 IST

ಮಂಗಳೂರು, ನ.17: ಇಲ್ಲಿನ ಪಣಂಬೂರು  ಎನ್‌ಎಂಪಿಟಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಗೇಟ್ ತುಂಡಾಗಿ ಮೈಮೇಲೆ ಬಿದ್ದ ಪರಿಣಾಮವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧ ವಿಟ್ಲದ ಈಶ್ವರ ನಾಯ್ಕ್‌ ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಮುಂಜಾನೆ  5:45ಕ್ಕೆ ಶಿಥಿಲಾವಸ್ಥೆಯಲ್ಲಿದ್ದ ಗೇಟ್  ಮುರಿದು ಬಿದ್ದಾಗ ಈಶ್ವರ ನಾಯ್ಕ್ ಗೇಟ್ ನಡಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News