ಕರ್ನಾಟಕದಲ್ಲಿ ಕೇರಳ ಅಧ್ಯಾಪಕಿಯ ಹತ್ಯೆ: ಯುವಕನಬಂಧನ

Update: 2016-11-17 07:25 GMT

ವೀರಾಜಪೇಟೆ, ನ. 17: ಕರ್ನಾಟಕದ ಗೋಣಿಕೊಪ್ಪ ಎಂಬಲ್ಲಿ ಕೇರಳ ಮೂಲದ ಅಧ್ಯಾಪಕಿಯೊಬ್ಬರನ್ನು ಕೊಂದು ಹಾಕಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಪ್ರಮೀಳಾ(33) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಹರೀಶ್ (19)ಎಂಬಾತನನ್ನು ಶ್ರೀಮಂಗಲಂ ಪೊಲೀಸರು ಬಂಧಿಸಿದ್ದಾರೆ. ಹರೀಶ್ ತೋಟ ಕಾರ್ಮಿಕ ಮುತ್ತು ಎಂಬವರ ಪುತ್ರನಾಗಿದ್ದು, ಟಿಸೇಟ್ಟಿಗೆರಿ ಎಂಬಲ್ಲಿನ ಶಾಲೆಯಲ್ಲಿ ಕಲಿಯುವ ತನ್ನ ಪುತ್ರಿಯನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ಈತ ಪ್ರಮೀಳಾರ ಮೇಲೆ ದಾಳಿ ಮಾಡಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಪ್ರಮಿಳಾರನ್ನು ಥಳಿಸಿಕೊಲೆ ನಡೆಸಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಪ್ರಮೀಳಾ ಎರ್ನಾಕುಲಂ ನಿವಾಸಿ ಕುಮಾರನ್ ಎಂಬವರ ಪುತ್ರಿಯಾಗಿದ್ದಾರೆ. ಪತಿ ಗಿರೀಶ್ ಎರ್ನಾಕುಲಂನಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ತಂದೆಯ ಮನೆಯಲ್ಲಿ ಮಕ್ಕಳೊಂದಿಗೆ ಪ್ರಮೀಳಾ ವಾಸವಿದ್ದರು. ವೆಸ್ಟ್ ನೆಮ್ಮಲದ ಸರಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ ತಾತ್ಕಾಲಿಕ ಅಧ್ಯಾಪಕಿಯಾಗಿ ಪ್ರಮೀಳಾಸೇವೆ ಸಲ್ಲಿಸುತ್ತಿದ್ದು, ಮಕ್ಕಳಾದ ಪೂಜಾ, ನಂದೀಶ್‌ರನ್ನು ಬಿಟ್ಟು ಅಗಲಿದ್ದಾರೆ. ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಬಳಿಕ ನೆಮ್ಮಲದಲ್ಲಿ ಪ್ರಮೀಳಾರ ಮೃತದೇಹದ ಸಂಸ್ಕಾರ ಕಾರ್ಯ ನಡೆಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News