ಬಸ್-ಸೈಕಲ್ ಢಿಕ್ಕಿ: ಸೈಕಲ್ ಸವಾರ ಸಾವು
Update: 2016-11-17 23:08 IST
ಶಿರಸಿ, ನ.17: ಕೆಎಸ್ಸಾರ್ಟಿಸಿ ಬಸ್ ಹಾಗೂ ಸೈಕಲ್ ಸವಾರನ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಚಿಪಗಿ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಗೋವಿಂದ (50) ಮೃತಪಟ್ಟ ಸೈಕಲ್ ಸವಾರ. ಸೈಕಲ್ ಮೇಲೆ ದನಗಳಿಗೆ ಹುಲ್ಲು ತರುತ್ತಿದ್ದ ವೇಳೆಯಲ್ಲಿ ಗೋಕಾಕ್‌ನಿಂದ ಶಿರಸಿ ಮಾರ್ಗವಾಗಿ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.