ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ಕುಮಾರಸ್ವಾಮಿಯ ಹೊಸ ಪ್ಲಾನ್!
Update: 2016-11-18 12:46 IST
ಹುಬ್ಬಳ್ಳಿ, ನ.18: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪಕ್ಷವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಗಟ್ಟಿಗೊಳಿಸುವ ಉದ್ದೇಶದಿಂದ ಹುಬ್ಬಳ್ಳಿ ನಗರದಲ್ಲಿ ಮನೆ ಮಾಡಿದ್ದು, ಪತ್ನಿ ಅನಿತಾ ಹಾಗೂ ಕುಟುಂಬದ ಸದಸ್ಯರೊಂದಿಗೆ ನೂತನ ಗೃಹ ಪ್ರವೇಶ ಮಾಡಿದರು. ಉತ್ತರ ಕರ್ನಾಟಕದ ಬೆಳಗಾವಿ ಅಥವಾ ವಿಜಯಪುರ ಜಿಲ್ಲೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿರುವ ಕುಮಾರಸ್ವಾಮಿ, ಆ ಭಾಗದಲ್ಲಿ ಪಕ್ಷವು 40-50 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.