×
Ad

ಸೌಜನ್ಯ ಕೊಲೆ ಪ್ರಕರಣ; .ಮಲ್ಲಿಕ್‌ ಜೈನ್‌, ಉದಯ್‌ ಜೈನ್‌ , ಧೀರಜ್‌ ಜೈನ್‌ಗೆ ಸಿಬಿಐನಿಂದ ಸಮನ್ಸ್

Update: 2016-11-19 19:50 IST

ಬೆಂಗಳೂರು, ನ.19: ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ  ಪ್ರಕರಣಕ್ಕೆ ಸಂಬಂಧಿಸಿ  ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದ ಮಲ್ಲಿಕ್‌ ಜೈನ್‌, ಉದಯ್‌ ಜೈನ್‌ ಮತ್ತು ಧೀರಜ್‌ ಜೈನ್‌ಗೆ ನವೆಂಬರ್‌ 29ರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ., 

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರಿಗೆ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಆರೋಪಿ ಸಂತೋಷ್‌ ರಾವ್‌ ವಿರುದ್ಧ ಚಾರ್ಜ್‌ಶೀಟ್‌ಸಲ್ಲಿಸಲಾಗಿತ್ತು. ಇದನ್ನು ಆಕ್ಷೇಪಿಸಿ ಸೌಜನ್ಯ ತಂದೆ ಚಂದಪ್ಪ ಗೌಡ ತಕರಾರು ಅರ್ಜಿ ಸಲ್ಲಿಸಿ, ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ  ಬಿ.ಎಸ್‌ ರೇಖಾ ಅವರು ಆರೋಪಿ ಸಂತೋಷ್‌ ಮಾನಸಿಕ ಖಿನ್ನತೆಗೊಳಗಾಗಿರುವ ವ್ಯಕ್ತಿಯಾಗಿರುವುದರಿಂದ ಈತನೊಬ್ಬನಿಂದ ಎಲ್ಲವೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಲ್ಲಿಕ್‌ ಜೈನ್‌, ಉದಯ್‌ ಜೈನ್‌ ಮತ್ತು ಧೀರಜ್‌ ಜೈನ್‌ ಆರೋಪಿಗಳೆಂದು ಪರಿಗಣಿಸಿ ಸಮನ್ಸ್‌ ಜಾರಿ ಮಾಡಿದ್ದಾರೆ. 
ಸಿಬಿಐ ಪರ ಎಸ್ ಪಿ ಪಿ ಶಿವಾನಂದ ಪೆರ್ಲ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News