ಟ್ರಾಕ್ಟರ್- ಬೈಕ್ ಅಪಘಾತ: ಓರ್ವ ಮೃತ್ಯು
Update: 2016-11-20 13:10 IST
ಕೋಲಾರ, ನ.20: ಟ್ರಾಕ್ಟರ್‌ಗೆ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ 75ರ ಅಜ್ಜಪ್ಪನಹಳ್ಳಿ ಗೇಟ್ ಬಳಿ ಇಂದು ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಕೂಡಾ ಗಾಯಗೊಂಡಿದ್ದಾನೆ.
ಕೋಲಾರದ ನರಸಾಪುರ ಗ್ರಾಮದ ಸುರೇಶ್(32) ಮೃತಪಟ್ಟ ಬೈಕ್ ಸವಾರ.
ಸುರೇಶ್(28) ಗಾಯಾಳು. ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮಾಂತರ ಠಾಣೆಯ ಪೊಲೀಸರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.