ತಲೆ ಕಡಿದು ಯುವಕನ ಬರ್ಬರ ಹತ್ಯೆ
Update: 2016-11-20 20:17 IST
ಮುಂಡಗೋಡ, ನ.20: ಯುವಕನೊಬ್ಬನ ತಲೆ ಕಡಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯದ ಹೆಚ್ಚುವರಿ ನೀರು ಬಿಡುವ ಕಾಲುವೆ ಹತ್ತಿರ ರವಿವಾರ ನಡೆದಿದೆ.
ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಅಬ್ದುಲ್ ಖಾದರ್ ಅಲ್ಲಿಸಾಬ ನದಾಫ್ (17) ಕೊಲೆಯಾದ ಯುವಕ.
ಮೃತ ಯುವಕ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಧರ್ಮಾ ಜಲಾಶಯದ ಹೆಚ್ಚುವರಿ ನೀರು ಬಿಡುವ ಕಾಲುವೆಯ ಬಳಿ ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.