ಜನಾರ್ದನ ರೆಡ್ಡಿಗೆ ಐಟಿ ಶಾಕ್
Update: 2016-11-21 15:07 IST
ಬೆಂಗಳೂರು, ನ.21: ಇತ್ತೀಚೆಗಷ್ಟೇ ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಒಎಂಸಿ ಕಚೇರಿಗೆ ಆದಾಯ ತೆರಿಗೆ ಇಲಾಖೆ ಸೋಮವಾರ ದಾಳಿ ನಡೆಸಿದೆ.
ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿಯ ನಿವಾಸದ ಬಳಿಯಿರುವ ಒಎಂಸಿ, ಎಎಂಸಿ ಕಚೇರಿಗೆ ದಾಳಿ ನಡೆಸಿರುವ ಐವರು ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ರೆಡ್ಡಿಯ ನಿವಾಸದ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದಾಳಿ ನಡೆದ ಸುದ್ದಿ ತಿಳಿಸಿದ ರೆಡ್ಡಿ ಹೈದರಾಬಾದ್‌ನಿಂದ ಬಳ್ಳಾರಿಗೆ ಧಾವಿಸಿದ್ದಾರೆ.
ಜನಾರ್ದನ ರೆಡ್ಡಿ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತನ್ನ ಮಗಳ ಮದುವೆಯನ್ನು ಕೋಟ್ಯಂತರ ರೂ. ಖರ್ಚು ಮಾಡಿ ನೆರವೇರಿಸಿದ್ದರು.