×
Ad

ಜನಾರ್ದನ ರೆಡ್ಡಿ ಮನೆಗೆ ದಾಳಿ ಮಾಡಿದ ಐಟಿ ಇಲಾಖೆ ಕೇಳಿರುವ ಪ್ರಶ್ನೆಗಳೇನು ?

Update: 2016-11-21 20:29 IST

ಬಳ್ಳಾರಿ, ನ.21: ತನ್ನ ಮಗಳ ವೈಭವೋಪೇತ ಮದುವೆ ನಡೆಸಿದ ಮಾಜಿ ಸಚಿವ, ಗಣಿಧಣಿ ಜನಾರ್ಧನ ರೆಡ್ಡಿಯವರ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಮದುವೆಗೆ ಸಂಬಂಧಪಟ್ಟ ಖರ್ಚುವೆಚ್ಚಗಳ ಕುರಿತು ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ಕುಮಾರ್ ವರ್ಮಾ ಅವರು ರೆಡ್ಡಿಗೆ ನೋಟಿಸ್ ಜಾರಿ ಮಾಡಿದ್ದು, ಮದುವೆಯ ಸಂಪೂರ್ಣ ಖರ್ಚುವೆಚ್ಚದ ವಿವರ ನೀಡಬೇಕೆಂದು ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಕೇಳಲಾದ ಪ್ರಶ್ನೆಗಳು ಇಂತಿವೆ.

1. ತಮ್ಮ ಪುತ್ರಿ ಬ್ರಹ್ಮಣಿ ಹಾಗೂ ರಾಜೀವ್ ರೆಡ್ಡಿಯ ಮದುವೆ ಸಂದರ್ಭದಲ್ಲಿ ಮದುವೆಗೆ ಮುನ್ನ, ಮದುವೆ ಮತ್ತು ಮದುವೆಯ ಬಳಿಕ ನಡೆದ ಕಾರ್ಯಕ್ರಮಗಳ ವಿವರ ನೀಡಿ.

(ನಡೆದ ಕಾರ್ಯಕ್ರಮ, ಆಗಮಿಸಿದ ಅತಿಥಿಗಳ ಸಂಖ್ಯೆ, ಒಟ್ಟು ಅಂದಾಜು ವೆಚ್ಚ ಮತ್ತು ಆದಾಯದ ಮೂಲ)

2. ಕಾರ್ಯಕ್ರಮ ಸಂಯೋಜಕರ ಮೂಲಕ ಸಂಯೋಜಿಸಲ್ಪಟ್ಟ ಕಾರ್ಯಕ್ರಮಗಳು ಯಾವುವು? ವಿವರ ನೀಡಿ

(ನಡೆದ ಕಾರ್ಯಕ್ರಮಗಳು, ಕಾರ್ಯಕ್ರಮ ಸಂಯೋಜಕ ಸಂಸ್ಥೆಯ ಹೆಸರು ಮತ್ತು ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಮಾಡಿದ ಪಾವತಿ)

3. ಮದುವೆಯ ಸಂದರ್ಭದಲ್ಲಿ ಯಾರಿಗಾದರೂ ಮನೋರಂಜನಾ ಕಾರ್ಯಕ್ರಮಕ್ಕಾಗಿ ಹಣ ನೀಡಲಾಗಿದೆಯೇ? ಇದ್ದಲ್ಲಿ ಈ ಕೆಳಗಿನ ವಿವರಗಳನ್ನು ನೀಡಿ

ನಡೆದ ಕಾರ್ಯಕ್ರಮ, ಭಾಗವಹಿಸಿದ ವ್ಯಕ್ತಿಗಳು, ಮತ್ತವರ ವಿಳಾಸ, ಸಂಪರ್ಕ ಸಂಖ್ಯೆ, ಹಣ ಪಾವತಿ ಮಾಡಿದ ಉದ್ದೇಶ ಮತ್ತು ಪಾವತಿಸಿದ ಹಣ)


4. ಈ ಕೆಳಗಿವ ವ್ಯವಸ್ಥೆಗಳಿಗೆ ಆದ ಮತ್ತು ಆಗಬಹುದಾದ ಖರ್ಚುವೆಚ್ಚಗಳ ವಿವರ ನೀಡಿ

1.ಅಡುಗೆ ವ್ಯವಸ್ಥೆ
2. ಶಾಮಿಯಾನ, ಪೆಂಡಾಲ್
3. ಪುಷ್ಪಾಲಂಕಾರ
4. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ
5. ಸಂಗೀತ ಮತ್ತು ಮನರಂಜನೆ
6. ಸಾರಿಗೆ ಸೌಲಭ್ಯ
7. ವಸತಿ ವ್ಯವಸ್ಥೆ
8. ಭದ್ರತೆ
9. ಸಭಾಂಗಣ, ಮೈದಾನ
10. ಫೋಟೊಗ್ರಫಿ ಮತ್ತು ವೀಡಿಯೋಗ್ರಫಿ
11. ಧಾರ್ಮಿಕ ಕಾರ್ಯಕ್ರಮಗಳ ಖರ್ಚುವೆಚ್ಚ
12. ಪುರೋಹಿತರು, ಧರ್ಮಗುರುಗಳು, ಮತ್ತಿತರರಿಗೆ ನೀಡಿದ ಕಾಣಿಕೆ
13. ಇನ್ನಿತರ  ಖರ್ಚುವೆಚ್ಚಗಳು

5. ಮದುವೆ ಆಮಂತ್ರಣ ಪತ್ರದ ವಿವರಗಳನ್ನು ಈ ಕೆಳಕಂಡಂತೆ ನೀಡಿ

(ಆಮಂತ್ರಣದ ವಿಧ, ಮುದ್ರಿಸಲ್ಪಟ್ಟ ಆಮಂತ್ರಣ ಪತ್ರಗಳ ಸಂಖ್ಯೆ, ಮುದ್ರಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಪಾವತಿಸಬೇಕಾದ/ಪಾವತಿಸಿದ ಹಣ, ಪಾವತಿಯ ವಿಧಾನ)

6. ಮದುವೆಗೆ ತಾವು, ತಮ್ಮ ಹತ್ತಿರದ ಸಂಬಂಧಿಕರು ಖರೀದಿಸಿದ ಬಟ್ಟೆಬರೆಗಳು, ಆಭರಣಗಳು, ನ್ನಿತರ ವೌಲ್ಯಯುತ ಸೊತ್ತುಗಳು ಇತ್ಯಾದಿಗಳ ವಿವರ

(ಹೆಸರು, ವಿಳಾಸ, ಸಂಪರ್ಕ ಸಂಖ್ಯೆಗಳ ಸಹಿತ)

7. ಹಣ ಪಾವತಿಸಿದ ಬ್ಯಾಂಕ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ವಿವರ

8. ನಗದು ನೀಡಿದ್ದಲ್ಲಿ ಆದಾಯದ ಮೂಲ, ಹಣ ಪಾವತಿಸಿದ ದಿನಾಂಕ ಮತ್ತು ಹಣ ಪಡೆದಾತನ ಸಂಪೂರ್ಣ ವಿವರ

9. ಮದುವೆಗೆ ನಗದು, ಬ್ಯಾಂಕಿಂಗ್ ವಿಧಾನಗಳನ್ನು ಹೊರತುಪಡಿಸಿ ಇನ್ನಿತರ ವಿಧಾನಗಳ ಮೂಲಕ ಪಾವತಿ ಮಾಡಲಾಗಿದೆಯೇ?

10. ಕಾರ್ಯಕ್ರಮದ ಸಂದರ್ಭದಲ್ಲಿ ಅತಿಥಿಗಳಿಗೆ ವಿತರಿಸಲಾದ ಉಡುಗೊರೆಗಳ ವಿವರ. ಉಡುಗೊರೆಗಳ ಆದಾಯದ ಮೂಲ, ವೌಲ್ಯವನ್ನು ನಮೂದಿಸಿ

12. ನ. 11ರ ವೇಳೆಗೆ ಪಾವತಿಸಲು ಬಾಕಿ ಇರುವ ಮೊತ್ತವನ್ನು ಈ ಕೆಳಕಂಡಂತೆ ನೀಡಿ

(ವ್ಯಕ್ತಿಯ ಹೆಸರು/ ಸಂಸ್ಥೆ, ಪಾವತಿಸಬೇಕಾದ ಮೊತ್ತ, ಪಾವತಿಸುವ ಉದ್ದೇಶ)

13. ಕಾರ್ಯಕ್ರಮವನ್ನು ಸಂಯೋಜಿಸಿದವರ ಸಂಪೂರ್ಣ ವಿವರಗಳನ್ನು ನೀಡಿ

14. ವಿವಿಧ ಸೇವೆಗಳನ್ನು ಒದಗಿಸಿದವರು ನೀಡಿದ ಅಂದಾಜುವೆಚ್ಚದ ಪಟ್ಟಿಯನ್ನು ನೀಡಿ

15. ಇನ್ನಿತರ ಯಾವುದೇ ವಿವರಗಳಿದ್ದರೆ ನೀಡಿ.

ಈ ಎಲ್ಲಾ ವಿವರಣೆಯನ್ನು ಈ ತಿಂಗಳ 25 ರೊಳಗೆ ನೀಡಲು ನೋಟಿಸ್ ನಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News