×
Ad

ಇನಾಯತುಲ್ಲಾ, ವಸಂತ ಕುಮಾರ್‌ಗೆ ‘ಭಟ್ಟಾಕಳಂಕ ’ ಪ್ರಶಸ್ತಿ ಇಂದು ರಾಜ್ಯ ಪತ್ರಕರ್ತರ ಸಮಾವೇಶದಲ್ಲಿ ಪ್ರದಾನ

Update: 2016-11-25 23:16 IST

ಟ್ಕಳ, ನ.25: ಹಿರಿಯ ಪತ್ರಕರ್ತ ಇನಾಯಿತುಲ್ಲಾ ಗವಾಯಿ ಹಾಗೂ ವಸಂತ ಕುಮಾರ ಕತಗಾಲ ಅವರಿಗೆ ಭಟ್ಕಳ ಕಮಲಾವತಿ ಶ್ಯಾನಭಾಗ್ ಸಭಾಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ‘ಭಟ್ಟಾಕಳಂಕ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇನಾಯತುಲ್ಲಾ ಗವಾಯಿ ಹಲವು ವರ್ಷಗಳಿಂದ ಸಾಹಿಲ್ ಆನ್‌ಲೈನ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತೆಯೇ ವಸಂತ ಕುಮಾರ ಕತಗಾಲ ಹಲವು ವರ್ಷಗಳಿಂದ ಪತ್ರಿಕಾ ಕೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುದ್ದಿಯ ಹೊಸ ಮಗ್ಗುಲಿನ ಅನ್ವೇಷಣಾ ವರದಿಗಳನ್ನು ಮನಗಂಡು ಕನ್ನಡ ಭಾಷೆಯ ವ್ಯಾಕರಣಕಾರ ಭಟ್ಟಾಕಳಂಕರ ಹೆಸರಿನಲ್ಲಿ ಕೊಡಮಾಡುವ ‘ಭಟ್ಟಾಕಳಂಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರನ್ನು ಜಿಲ್ಲೆಯ ಅನೇಕ ಪತ್ರಕರ್ತರು, ಸಾಹಿತಿಗಳು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News