ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ

Update: 2016-11-27 18:58 GMT

  ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ
-ಎಚ್.ಡಿ ಕುಮಾರಸ್ವಾಮಿ,ಮಾಜಿ ಮುಖ್ಯಮಂತ್ರಿ
  ಅಧಿಕಾರಕ್ಕೇರಿದ ಬಳಿಕ ರೈತರ ಜಮೀನಿಗೆ ಕನ್ನ.

---------------------
  ಕಾಶ್ಮೆರ ಸಮಸ್ಯೆಗೆ ಬೀದಿಯಲ್ಲಿ ಪರಿಹಾರ ಸಿಗುವುದಿಲ್ಲ
-ರವಿಶಂಕರ್ ಗುರೂಜಿ,ಆರ್ಟ್ಸ್ ಆಫ್ ಲಿವಿಂಗ್, ಸಂಸ್ಥಾಪಕ
  ತಮ್ಮ ಸಮಾವೇಶಕ್ಕೆ ಬಲಿಯಾಗಿರುವ ಯಮುನಾನದಿಗೆ ಒಂದು ಪರಿಹಾರ ಸೂಚಿಸಿ.

---------------------
  ಹುಟ್ಟುವಾಗ ಹೆಸರು ಇರುವುದಿಲ್ಲ ಉಸಿರು ಇರುತ್ತದೆ. ಸಾಯುವಾಗ ಉಸಿರು ಇರುವುದಿಲ್ಲ ಹೆಸರು ಉಳಿಯಬೇಕು
-ಯು.ಟಿ ಖಾದರ್, ಸಚಿವ
  ಅದಕ್ಕಾಗಿ ಕಾರ್ಯಕರ್ತರ ಮೂಲಕ ಗಲ್ಲಿ ಗಲ್ಲಿಯಲ್ಲಿ ತಮ್ಮ ಹೆಸರಿನ ಬ್ಯಾನರ್ ಹಾಕಿಸ್ತಿದ್ದೀರಾ?
---------------------
  ಯಡಿಯೂರಪ್ಪ ಮತ್ತು ನಾನು ಅಣ್ಣ ತಮ್ಮಂದಿರಿದ್ದಂತೆ
-ಈಶ್ವರಪ್ಪ ವಿ.ಪ.ವಿ.ನಾಯಕ
  ಯಾರು ಅಣ್ಣ, ಯಾರು ತಮ್ಮ ಎನ್ನುವ ವಿಷಯದಲ್ಲಷ್ಟೇ ಸಣ್ಣದೊಂದು ತಕರಾರು.

---------------------
ಆಸ್ವತ್ರೆಯವರು ಸಚಿವನಾದ ನನ್ನಿಂದಲೇ ಹಳೆ ನೋಟು ಸ್ವೀಕರಿಸಲಿಲ್ಲ ಎಂದ ಮೇಲೆ ಜನಸಾಮಾನ್ಯನ ಸ್ಥಿತಿ ಹೇಗಿರಬೇಕು
-ಡಿ.ವಿ.ಸದಾನಂದ ಗೌಡ,ಕೇಂದ್ರ ಸಚಿವ
  ಕಾರ್ಡ್ ಬಳಸಬಹುದಿತ್ತಲ್ಲ?
---------------------
  ಮುಂಬರುವ ಅಸೆಂಬ್ಲಿ ಎಲೆಕ್ಷನ್‌ಗಳಲ್ಲಿ ಬಿಜೆಪಿಗೆ ಒಬ್ಬ ಮತದಾರನೂ ಮತ ಹಾಕುವುದಿಲ್ಲ
-ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ
ಮೋದಿಯವರು ಚುನಾವಣೆಗೆ ತಮ್ಮ ಆ್ಯಪ್ ಬಳಸುತ್ತಾರಂತೆ.

---------------------
   ತಪ್ಪು ಮಾಡಿದ ಎಲ್ಲ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತಾ ಹೋದರೆ ಇಲಾಖೆ ಖಾಲಿ ಆಗಲಿದೆ

  -ಟಿ.ಬಿ.ಜಯಚಂದ್ರ,ಸಚಿವ

ತಪ್ಪು ಮಾಡಿದವರನ್ನು ಉಳಿಸುತ್ತಾ ಹೋದರೆ ನಾಡು ಖಾಲಿಯಾಗಲಿದೆ.

---------------------
ಘೋಷಣೆಯಾಗಿರುವ ನೀತಿಯನ್ನು ವಾಪಸ್ ಪಡೆಯುವುದು ಮೋದಿಯ ರಕ್ತದಲ್ಲೇ ಇಲ್ಲ
-ವೆಂಕಯ್ಯ ನಾಯ್ಡು,ಕೇಂದ್ರ ಸಚಿವ
  ಜಶೋದಾಬೆನ್ ಸ್ಥಿತಿಯನ್ನು ಮುಂದಿಟ್ಟು ಈ ಅಭಿಪ್ರಾಯವೇ?
---------------------
  ಹಿಲರಿ ಕ್ಲಿಂಟಲ್‌ರನ್ನು ಬಂಧಿಸುವುದಿಲ್ಲ
-ಡೊನಾಲ್ಡ್ ಟ್ರಂಪ್,ಅಮೆರಿಕ ನಿಯೋಜಿತ ಅಧ್ಯಕ್ಷ
  ಇಡೀ ಅಮೆರಿಕವೇ ನಿಮ್ಮ ಬಂಧನದಲ್ಲಿದೆ.

---------------------
  ನಿಜವಾದ ನಾಯಕನಾದವನು ಮುಂದೆ ನಿಂತು ಎಲ್ಲರನ್ನೂ ಗುರಿಯತ್ತ ಕೊಂಡೊಯ್ಯುತ್ತಾನೆ
-ವೆಂಕಯ್ಯ ನಾಯ್ಡು,ಕೇಂದ್ರ ಸಚಿವ
ಸದ್ಯಕ್ಕೆ ನಿಮ್ಮ ನಾಯಕರು ಎಲ್ಲರನ್ನೂ ಗುಳಿಯತ್ತ ಕೊಂಡೊಯ್ಯುತ್ತಿದ್ದಾರೆ.

---------------------
  ನೋಟು ನಿಷೇಧ ಕೇಂದ್ರ ಸರಕಾರದ ಸಂಘಟಿತ ಲೂಟಿ ಮತ್ತು ಕಾನೂನು ಬದ್ಧ ಕೊಳ್ಳೆ
-ಡಾ.ಮನಮೋಹನ್ ಸಿಂಗ್,ಮಾಜಿ ಪ್ರಧಾನಿ
  ಕಾನೂನು ಬದ್ಧವಾಗಿದ್ದ ಮೇಲೆ ಭಯವೇನು ಎನ್ನುತ್ತಿದ್ದಾರೆ ಬಿಜೆಪಿ ನಾಯಕರು.

---------------------
  ನಾವು ಸಂಸ್ಕೃತಿಯನ್ನು ರಕ್ಷಿಸಿದರೆ ನಮ್ಮನ್ನು ಸಂಸ್ಕೃತಿ ರಕ್ಷಿಸುತ್ತದೆ
-ಡಾ.ಡಿ.ವೀರೇಂದ್ರ ಹೆಗ್ಗಡೆ,ಧರ್ಮಾಧಿಕಾರಿ ಧರ್ಮಸ್ಥಳ
  ಆದರೂ ಸೌಜನ್ಯಾಳನ್ನು ರಕ್ಷಿಸಲಾಗಲಿಲ್ಲ.

---------------------
  ಹಳ್ಳಿಗೆ ಹೋಗದ ವೈದ್ಯರ ಸೊಕ್ಕು ಮುರಿಯುವೆ
-ರಮೇಶ್ ಕುಮಾರ್, ಸಚಿವ
ಕಾಯಿಲೆ ಬಿದ್ದಾಗ ವೈದ್ಯರ ಬಳಿ ಹೋಗುವ ಸಂದರ್ಭ ಬಂದರೆ ತುಸು ಎಚ್ಚರ.

---------------------
  ಕ್ಯಾಶ್‌ಲೆಸ್ ಭಾರತ
- ಮೋದಿ ಕರೆ
  ಕಾಸ್ಟ್ ಲೆಸ್ ಭಾರತ, ಕ್ಲಾಸ್ ಲೆಸ್ ಭಾರತ ಯಾವಾಗ?

  ನಾನು ಜೆಡಿಎಸ್‌ನಲ್ಲೇ ಇದ್ದಿದ್ರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ
-ಸಿದ್ದರಾಮಯ್ಯ,ಮುಖ್ಯಮಂತ್ರಿ
  ನೀವು ಜೆಡಿಎಸ್‌ನಲ್ಲೇ ಇದ್ದಿದ್ದರೆ ನಾನೂ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದರಂತೆ ಕುಮಾರಸ್ವಾಮಿ
---------------------
  ಮೋದಿ ಒಬ್ಬ ರಾಜಕಾರಣಿ ಮಾತ್ರವಲ್ಲ , ಅವರೊಬ್ಬ ಸುಧಾರಕ
-ನಂದಕುಮಾರ್, ಆರೆಸ್ಸೆಸ್ ನಾಯಕ
  ನಾರಾಯಣಗುರು, ವಿವೇಕಾನಂದರ ಸಮಕಾಲೀನರು ಎಂದು ಹೇಳುತ್ತಿದ್ದೀರಾ?
---------------------
  ನೋಟು ನಿಷೇಧದಿಂದ ಕಪ್ಪು ಹಣ ಹೊಂದಿದವರು ಪ್ರವಾಹಕ್ಕೆ ತುತ್ತಾದ ಆಲದ ಮರದಂತಾಗಿದ್ದಾರೆ
-ಅಮಿತ್ ಶಾ,ಬಿಜೆಪಿ ಅಧ್ಯಕ್ಷ
  ನೀವು ಪ್ರವಾಹಕ್ಕೆ ಮೊದಲೇ ಸುಳಿವು ಸಿಕ್ಕಿ ತಡ ಸೇರಿದ ಆಲದ ಮರವೇ?
---------------------
  ಜನರು ಇನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಹಣವನ್ನು ಖರ್ಚು ಮಾಡಬಹುದು
-ನರೇಂದ್ರ ಮೋದಿ,ಪ್ರಧಾನಿ
  ಡಿಜಿಟಲ್ ತಂತ್ರಜ್ಞಾನವಿಲ್ಲದವರು ಏನನ್ನು ಖರ್ಚು ಮಾಡಬೇಕು?
---------------------
  ಹಸು ದೇಶದ ಜನರ ಆರೋಗ್ಯ ವೃದ್ಧಿಸುತ್ತದೆ.
-ಕಲ್ಲಡ್ಕ ಪ್ರಭಾಕರ ಭಟ್,ಆರೆಸ್ಸೆಸ್ ನಾಯಕ
  ಮತ್ತೇಕೆ ನಿಮ್ಮ ಮಾನಸಿಕ ಆರೋಗ್ಯ ಈ ಮಟ್ಟದಲ್ಲಿ ಕುಸಿದು ಕೂತಿದೆ?
---------------------
  ಭಾರತದ ನೀರು ಪಾಕಿಸ್ತಾನಕ್ಕೆ ಹರಿಯಲು ಬಿಡುವುದಿಲ್ಲ
- ನರೇಂದ್ರ ಮೋದಿ,ಪ್ರಧಾನಿ
  ಭಾರತದ ಆಕಾಶದಲ್ಲಿರುವ ಮೋಡಗಳು ಪಾಕಿಸ್ತಾನದ ಕಡೆಗೆ ಸಾಗದ ಹಾಗೆ ಗೋಡೆ ಕಟ್ಟಿದರೆ ಹೇಗೆ?
---------------------
  ಅಧಿಕಾರದ ಕನಸು ಕಾಣುವುದು ತಪ್ಪಲ್ಲ
-ಡಿ.ಕೆ. ಶಿವಕುಮಾರ್, ಸಚಿವ
 ಅದಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಸಂಚು ಮಾಡುವುದು ತಪ್ಪು.

---------------------
  ಕರ್ನಾಟಕ, ಗೋವಾ, ಮಹಾರಾಷ್ಟ್ರ ಸಹೋದರರಿದ್ದಂತೆ
 -ರಾಮಕೃಷ್ಣ ದೊಡ್ಮನಿ,ಶಾಸಕ
  ಸಹೋದರರೆಂದ ಮಾತ್ರಕ್ಕೆ ಕಚ್ಚಾಡುತ್ತಲೇ ಇರಬೇಕೇ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...