×
Ad

ಎಟಿಎಂಗೆ ತುಂಬಿಸಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ಪತ್ನಿ ಎಲ್ವಿನ್ ಸೆರೆ;79.8 ಲಕ್ಷ ರೂ.ನಗದು ವಶ

Update: 2016-11-28 10:02 IST

ಬೆಂಗಳೂರು, ನ.28: ನಗರದ ಕೆ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ ಆಫ್‌ ಇಂಡಿಯಾ ಬಳಿಯಿಂದ ನ.23ರಂದು ಎಟಿಎಂಗೆ ತುಂಬಿಸಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ ಸೆಕ್ಯೂರ್‌ ಟ್ರಾನ್ಸೆಟ್  ಕಂಪೆನಿಯ ಚಾಲಕ ಡೋಮ್ನಿಕ್ ಎಂಬಾತನ ಪತ್ನಿ ಎಲ್ವಿನ್‌ ನ್ನು ಬಂಧಿಸಿರುವ ಪೊಲೀಸರು ಆಕೆಯ ಬಳಿಯಲ್ಲಿದ್ದ  79.8 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. 

ರವಿವಾರ ರಾತ್ರಿ  ಬಾಣಸವಾಡಿಯ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು  ಆರೋಪಿ ಡೋಮ್ನಿಕ್ ನ ಪತ್ನಿ ಎಲ್ವಿನ್‌ನನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಮನೆಯಲ್ಲಿ ಶೋಧ ನಡೆಸಿದಾಗ ಮನೆಯೊಳಗೆ 79.8 ಲಕ್ಷ ರೂ. ಪತ್ತೆಯಾಗಿದೆ. ಉಳಿದ 12 ಲಕ್ಷ ರೂ.ಗಳೊಂದಿಗೆ ಆರೋಪಿ ಡೋಮ್ನಿಕ್ ತಲೆಮರೆಸಿಕೊಂಡಿದ್ದಾನೆ. 

ಚಾಲಕ ಡೋಮ್ನಿಕ್‌ ನ.23ರಂದು ಮಧ್ಯಾಹ್ನ 1:30ಕ್ಕೆ ಎಟಿಎಂಗಳಿಗೆ ತುಂಬಿಸಬೇಕಿದ್ದ 1.31ಕೋಟಿ ರೂ. ಹೊಂದಿದ್ದ ವಾಹನವನ್ನು ಬ್ಯಾಂಕ್ ಆಫ್‌ ಇಂಡಿಯಾ  ಮುಂದೆ ನಿಲ್ಲಿಸಿ,  ಗನ್ ಮ್ಯಾನ್ ನ್ನು ವಾಹನದಿಂದ ಕೆಳಗಿಸಿದ್ದನು.  ಬಳಿಕ ಎಟಿಎಂಗೆ ತುಂಬಿಸಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದನು. 
ಈ ಸಂಬಂಧ ಚಿಕ್ಕಪೇಟೆ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಚಾಲಕನಿಗೆ ಶೋಧ ಕಾರ್ಯ ಕೈಗೊಂಡಿದ್ದರು. ನ.24ರಂದು ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಹಣ ಸಾಗಿಸುವ ವಾಹನವನ್ನು ಪತ್ತೆ ಹಚ್ಚಿದಾಗ ವಾಹನದಲ್ಲಿ 40 ಲಕ್ಷ ರೂ ಪತ್ತೆಯಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News