ಮೈಸೂರು ಕೋರ್ಟ್ ಆವರಣದಲ್ಲಿ ಸ್ಫೋಟ ಪ್ರಕರಣ; ಮೂವರ ಬಂಧನ
Update: 2016-11-28 22:26 IST
ಬೆಂಗಳೂರು, ನ.28: ಮೈಸೂರು ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಆ.1 ರಂದು ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡಿನ ಮಧುರೈನಲ್ಲಿ ಬಂಧಿಸಿದೆ..
ಆರೋಪಿಗಳಾದ ತಮಿಳುನಾಡು ಮೂಲದ ಸುಲೈಮಾನ್, ಮಧುರೈನ ಕರೀಮ್ ಮತ್ತು ಅಬ್ಬಾಸ್ ಅಲಿ ಎಂಬವರನ್ನು ತಮಿಳುನಾಡು ಮತ್ತು ತೆಲಂಗಾಣ ಪೊಲೀಸರ ಸಹಕಾರದೊಂದಿಗೆ ಎನ್‌ಐಎ ಬಂಧಿಸಿದೆ. ಇನ್ನೊಬ್ಬನನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಂಡಿದೆ.
ಮೈಸೂರಿನ ಕೋರ್ಟ್ ಆವರಣದಲ್ಲಿರುವ ಶೌಚಾಲಯ, ಮಲಪ್ಪುರಂನ ಕೋರ್ಟ್ ಆವರಣ ಸೇರಿದಂತೆ ದಕ್ಷಿಣ ಭಾರತದಲ್ಲಿ ನಡೆದ ಐದು ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ