ಭಾರೀ ಮೌಲ್ಯದ ಬೀಟಿ ಮರ, ಎರಡು ಲಾರಿ ವಶ
Update: 2016-11-28 22:50 IST
ವೀರಾಜಪೇಟೆ, ನ.28: ವೀರಾಜಪೇಟೆ-ಗೋಣಿಕೊಪ್ಪ ರಸ್ತೆಯ ಬಿಟ್ಟಂಗಾಲದ ಪೆಗ್ಗರಿಕಾಡು ಸಮೀಪ ರವಿವಾರ ಸಂಜೆ ಸುಮಾರು 7ಗಂಟೆಗೆ ಅಕ್ರಮ ಬೀಟಿ ಮರ ಹೊಂದಿದ ಎರಡು ಲಾರಿಗಳನ್ನು(ಕೆ.ಎಲ್13-2057 ಮತ್ತು ಕೆ.ಎ.12-1031) ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ಪಿ.ಗೋಪಾಲ್‌ಅವರ ನೇತೃತ್ವದ ತಂಡ ವಶಪಡಿಸಿಕೊಂಡಿದೆ.
ಸುಮಾರು 10ಲಕ್ಷ ರೂ. ಮೌಲ್ಯದ ಬೀಟಿ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿಯ ಆಧಾರದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಲಾರಿ ಚಾಲಕರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಕೆ.ಎಸ್.ಸುಬ್ರಾಯ, ಅರಣ್ಯ ರಕ್ಷಕರಾದ ಜತ್ತಪ್ಪನಾವಿ, ಸೋಮಯ್ಯ ಚಾಲಕರಾದ ಅಶೋಕ್, ಹರೀಶ್, ಅನಿಲ್‌ಹಾಗೂ ಲಾರೆನ್ಸ್ ಪಾಲ್ಗೊಂಡಿದ್ದರು.