×
Ad

ಕೊಡಗು ಮುಸ್ಲಿಮ್ ಯುವಕ ಸಂಘದ ವತಿಯಿಂದ ಕುಟುಂಬಕ್ಕೆ ಸಹಾಯ

Update: 2016-11-28 23:11 IST

ಸಿದ್ದಾಪುರ. ನ,28: ಕೊಡಗು ಮುಸ್ಲಿಮ್ ಯುವಕ ಸಂಘದ ವತಿಯಿಂದ ಶಾಹುಲ್ ಹಮೀದ್ ಮತ್ತು ಬಶೀರ್ ಅವರ ಕುಟುಂಬಕ್ಕೆ ಸಹಾಯ ದನ ವಿತರಿಸಲಾಯಿತು. ಟಿಪ್ಪು ಗಲಭೆ ಸಂದರ್ಭದಲ್ಲಿ ಮೃತಪಟ್ಟ ಕೂಡುಗದ್ದೆ ನಿವಾಸಿ ಶಹೀದ್ ಶಾಹುಲ್ ಹಮೀದ್ ಅವರ ಕುಟುಂಬಕ್ಕೆ 15ಸಾವಿರ ಹಾಗೂ ಇತ್ತೀಚೆಗೆ ಗೋ ರಕ್ಷಕರಿಂದ ಹಲ್ಲೆಗೆ ಒಳಗಾದ ಕೊಂಡಂಗೇರಿಯ ಬಶೀರ್ ಅವರ ವೈದ್ಯಕೀಯ ವೆಚ್ಚಕ್ಕಾಗಿ 10ಸಾವಿರ ರೂ.ನ್ನು ನೀಡಲಾಯಿತು
 ಈ ಸಂದರ್ಭ ಸಂಘದ ಅಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಸಂಕಷ್ಟಕ್ಕೊಳಗಾದ ಸಮುದಾಯ ಬಾಂಧವರ ಕುಟುಂಬಗಳಿಗೆ ನೆರವಾಗುವ ಉದ್ದೇಶ ದಿಂದ ಕೊಡಗು ಮುಸ್ಲಿಮ್ ಯುವಕ ಸಂಘ ಜಿಲ್ಲೆಯಲ್ಲಿ ರೂಪುಗೊಂಡಿದ್ದು, ಪ್ರಾಥಮಿಕ ಹಂತವಾಗಿ ಶಾಹುಲ್ ಮತ್ತು ಬಶೀರ್ ಅವರ ಕುಟುಂಬಕ್ಕೆ ನೆರವಾಗಿ ರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಮುಸಲ್ಮಾನರ ಮೇಲೆ ನಿರಂತರ ದಾಳಿಗಳು ನಡೆಯುತಿದ್ದು, ಇತ್ತೀಚೆಗೆ ಐಗೂರು ಮಸೀದಿಯಲ್ಲಿ ಕುರ್‌ಆನ್ ಸುಟ್ಟಿರುವ ಘಟನೆ ಇದರ ಭಾಗವಾಗಿದೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸು ವುದಾಗಿ ತಿಳಿಸಿದರು. ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ತಕ್ಷಣ ಆರೋಪಿಗಳ ಬಂಧನವಾಗ ಬೇಕು ಇಲ್ಲದಿದ್ದಲ್ಲಿ ಸಂಘಟನೆಯ ವತಿಯಿಂದ ಜಿಲ್ಲಾ ಕಚೇರಿ ಎದುರು ಪ್ರತಿಭಟಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಅಜೀಝ್‌, ಖಜಾಂಚಿ ನಾಸಿರ್ ಮಕ್ಕಿ, ಕಾರ್ಯದರ್ಶಿ ಖಾದರ್ ಮೂರ್ನಾಡು, ಮಜೀದ್ ಕೊಂಡಂಗೇರಿ, ಫಾರೂಖ್ ಗುಂಡಿಕೆರೆ ಮತ್ತು ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News