ಐಎಎಸ್ ಟಾಪರ್ ಟೀನಾ ದಾಬಿ ಪೋಷಕರಿಗೆ ಹಿಂದೂ ಮಹಾಸಭಾ ಪತ್ರ

Update: 2016-11-29 04:15 GMT

ಹೊಸದಿಲ್ಲಿ, ನ.29: 2016ರ ಐಎಎಸ್ ಟಾಪರ್ ಟೀನಾ ದಾಬಿ ಪ್ರೇಮ ಪ್ರಕರಣ ಇದೀಗ ವಿಚಿತ್ರ ತಿರುವು ಪಡೆದಿದೆ. ಐಎಎಸ್ ದ್ವಿತೀಯ ಸ್ಥಾನಿ ಅಮಿರ್ ಉಲ್ ಶಫಿ ಖಾನ್ ಅವರನ್ನು ವಿವಾಹವಾಗಲು ಟೀನಾ ನಿರ್ಧರಿಸಿರುವುದು ಲವ್‌ಜಿಹಾದ್‌ಕ್ಕೆ ಎಡೆ ಮಾಡಿಕೊಡುವಂಥದ್ದು ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ, ಟೀನಾ ಪೋಷಕರಿಗೆ ಪತ್ರ ಬರೆದಿದೆ!
ಉಗ್ರವಾದಿ ಕೇಸರಿ ಸಂಘಟನೆ ಪತ್ರ ಬರೆದಿರುವುದನ್ನು ಸಬ್‌ರಂಗ್ ಇಂಡಿಯಾ ವೆಬ್‌ಸೈಟ್ ಬೆಳಕಿಗೆ ತಂದಿದೆ. ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ, "ಐಎಎಸ್ ಪರೀಕ್ಷೆಯಲ್ಲಿ ಈಕೆಯ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಅಖ್ತರ್ ಅಮಿರ್ ಉಲ್ ಶಫಿ ಅವರನ್ನು ವಿವಾಹವಾಗಲು ಕೈಗೊಂಡ ನಿರ್ಧಾರ "ನೋವು ತರುವಂಥದ್ದು" ಎಂದು ವಿವರಿಸಲಾಗಿದೆ.
ಅಖ್ತರ್ ಅವರನ್ನು ಮೊದಲು ಘರ್‌ ವಾಪಸಿಗೆ ಮನವೊಲಿಸಬೇಕು. ಅವರು ಹಿಂದುತ್ವಕ್ಕೆ ಮರಳಬೇಕು. ಈ ಪ್ರಸ್ತಾವಿತ ವಿವಾಹದ ಬಗ್ಗೆ ತಂದೆ ಗಾಢವಾಗಿ ಯೋಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಮ್ಮು ಕಾಶ್ಮೀರ ಮೂಲದ ಶಫಿ ಜತೆಗಿನ ಪ್ರೇಮ ಸಂಬಂಧ ನವೆಂಬರ್ 10ರಂದು ಮೊದಲ ಬಾರಿಗೆ ಬಹಿರಂಗವಾಗಿತ್ತು. ಈ ಅಂತರ ಧರ್ಮೀಯ ಸಂಬಂಧದ ಬಗ್ಗೆ ಜನ ಹೇಗೆ ಯೋಚಿಸಿದರೂ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟೀನಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News