ಪ್ಲಾಸ್ಟಿಕ್ ಮಾರಾಟ ಅಂಗಡಿ ಮೇಲೆ ದಾಳಿ : ಸಾವಿರಾರು ರೂಗಳ ಪ್ಲಾಸ್ಟಿಕ್ ವಶ
Update: 2016-11-29 20:16 IST
ಹಾಸನ,ನ.29: ನಗರಸಭೆಯಿಂದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮೇಲೆ ದಾಳಿ ನಡೆಸಿ ಅವರಿಂದ ಸಾವಿರಾರು ರೂಗಳ ಬೆಲೆ ಬಾಳುವ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಸಂತೇಪೇಟೆ ಬಳಿ ಹೊಸಲೈನ್ ರಸ್ತೆಯಲ್ಲಿರುವ ಬೆನಕ ಟ್ರೇಡರ್ಸ್, ಅನ್ನಪೂರ್ಣೇಶ್ವರಿ ಪ್ರಾವಿಜನ್ ಸ್ಟೋರ್, ಅಜಂತ ವೈನ್ ಅಂಗಡಿ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇವರ ಬಳಿ ಇದ್ದ ಅಕ್ರಮ ಪ್ಲಾಸ್ಟಿಕನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ಸ್ಥಳದಲ್ಲೆ ದಂಢ ವಿಧಿಸಲಾಯಿತು. ನಂತರ ವಿವಿಧ ಕಡೆಗಳಿಗೆ ತೆರಳಿ ಪರಿಶೀಲನೆಮ ಮಾಡಿದರು.
ಇದೆ ವೇಳೆ ನಗರಸಭೆಯ ಆರೋಗ್ಯಾಧಿಕಾರಿಗಳಾದ ಕೃಷ್ಣಮೂರ್ತಿ, ಆಧಿಶ್, ರಂಜನ್ ಇತರರು ಇದ್ದರು.