×
Ad

ಹಾಲೇರಿ: ಮನೆ ಕಳವು

Update: 2016-11-29 23:14 IST

ಸುಂಟಿಕೊಪ್ಪ, ನ.29: ಕೆದಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲೇರಿ ಗ್ರಾಮದ ಕೆ.ಟಿ. ಸಹದೇವ(ಸಗು) ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹಾಡಹಗಲೇ ಕಳ್ಳತನ ನಡೆಸಿರುವ ಘಟನೆ ವರದಿಯಾಗಿದೆ.


 ಮನೆಯ ಮಂದಿ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳನೊಬ್ಬ ಮನೆಯ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಕಟ್ಟಿಗೆ ತುಂಡರಿಸಲು ಇರಿಸಿದ ಕೊಡಲಿಯಿಂದ ಗೋದ್ರೆಜ್‌ನ್ನು ಮುರಿದು, ಅದರಲಿದ್ದ 5 ಪವನ್ ಚಿನ್ನ, ನಗದು ರೂ.5,000 ನ್ನು ದೋಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.


ಸ್ಥಳಕ್ಕೆ ಸುಂಟಿಕೊಪ್ಪಪೊಲೀಸ್ ಠಾಣೆಯ ಎಎಸ್ಸೈ ಪಾರ್ಥ ಮತ್ತು ಸಿಬ್ಬಂದಿ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News