ಜಾತಿ ನಿಂದನೆ: ಐವರ ಮೇಲೆ ಪ್ರಕರಣ ದಾಖಲು
Update: 2016-11-29 23:16 IST
ಮುಂಡಗೋಡ, ನ.29: ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 24 ರಂದು ತೊಗರಳ್ಳಿ ಗ್ರಾಮದ ಹಾಲಿನ ಡೈರಿಯೊಂದರಲ್ಲಿ ಕ್ಯಾನ್ ಸ್ವಚ್ಛಗೊಳಿಸುತ್ತಿದ್ದ ಈರಪ್ಪ ಹನಮಂತಪ್ಪಭೊವಿವಡ್ಡರ್‌ಗೆ ಸತೀಶ ನಾಯಕ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಜಾತಿಯನ್ನು ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಈರಪ್ಪ ಭೊವಿವಡ್ಡರ ಸೋಮವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.