×
Ad

ಅಪಘಾತ: ಇಬ್ಬರು ಯುವಕರು ಮೃತ್ಯು

Update: 2016-11-30 23:00 IST

ವೀರಾಜಪೆಟೆ, ನ,30: ದಕ್ಷಿಣ ಕೊಡಗಿನ ಕುಟ್ಟಕ್ಕೆ ಗ್ರಾಮದ ಕೇರಳ ಗಡಿಯ ತೋಲ್‌ಪಟ್ಟಿ ಚೆಕ್‌ಪೋಸ್ಟ್ ಸಮೀಪ ಬುಧವಾರ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಕುಟ್ಟದ ಹೂವಿನಕಾಡು ಎಸ್ಟೇಟ್ ಸಿಬ್ಬಂದಿಯಾಗಿದ್ದ ದಿ.ಕಂದಸ್ವಾಮಿಯವರ ಪುತ್ರ ಸಂತೋಷ್(20) ಹಾಗೂ ಶಿವಲಿಂಗಂ ಎಂಬವರ ಪುತ್ರ ಶಿವಶಂಕರ್(20) ಎಂಬವರು ಮೃತಪಟ್ಟ ಯುವಕರು. ಕೇರಳದ ಮಾನಂದವಾಡಿಯಿಂದ ಕೊಡಗಿನ ಕುಟ್ಟದ ಕಡೆಗೆ ಬರುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನ ಹಿಂಬದಿಗೆ ಢಿಕ್ಕಿಯಾಗಿ ಬೈಕ್ ಕೆಳಗೆ ಬಿದ್ದು ಅಪಘಾತವುಂಟಾಗಿದೆ.

ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮಾನಂದವಾಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕೆಗ್ಷೆ ಇರಿಸಲಾಗಿದೆ. ಕುಟ್ಟ ಪೋಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News