×
Ad

ಸಂಗೀತ ಮೊಬೈಲ್ ಸೆಂಟರ್‌ನಲ್ಲಿ ಮೈಕ್ರೋ ಎಟಿಎಂ ಸೌಲಭ್ಯ

Update: 2016-12-01 22:50 IST


ಮೂಡಿಗೆರೆ, ಡಿ.1: ಕೇಂದ್ರ ಸರಕಾರ ಕೈಗೊಂಡಿರುವ ನೋಟು ನಿಷೇಧ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಸಮರ್ಪಕವಾಗಿ ಹಣ ದೊರಯದೆ ಪರಿತಪಿಸುತ್ತಿದ್ದ ಗ್ರಾಹಕರಿಗೆ ಕಳೆದ 5 ದಿನಗಳಿಂದ ನಗರದ ಸಂಗೀತ ಮೊಬೈಲ್ ಸೆಂಟರ್‌ನಲ್ಲಿ ಮೈಕ್ರೋ ಎಟಿಎಂನಿಂದ ಹಣ ಪಡೆಯುವ ಸೌಲಭ್ಯ ಒದಗಿಸಲಾಗಿದೆ.


ಸಂಗೀತ ಮೊಬೈಲ್ ಶೋರೂಮ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ಚಂದ್ರ ಅವರ ಸೂಚನೆ ಮೇರೆಗೆ, ಶೋರೂಮ್‌ಗೆ ಮೊಬೈಲ್ ಕೊಳ್ಳಲು ಬಂದಂತಹ ಜನರಿಂದ ಪಡೆದ ಹಣವನ್ನು ಮೈಕ್ರೋ ಎಟಿಎಂ ಮುಖಾಂತರ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಣ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.


ಸುಮಾರು 2 ಸಾವಿರ ರೂ.ವರೆಗೆ ಮಾತ್ರ ಹಣ ಪಡೆಯುವ ಅವಕಾಶವಿದ್ದು, ಮಧ್ಯಮ ವರ್ಗದ ಜನರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಣ ಪಡೆಯುವರು ಎಟಿಎಂ ಕಾರ್ಡ್‌ನೊಂದಿಗೆ ಯಾವುದಾದರೂ ಗುರುತಿನ ಚೀಟಿಯ ಝೆರಾಕ್ಸ್ ಪ್ರತಿಯನ್ನು ನೀಡಿ ಹಣ ಪಡೆಯಬಹುದಾಗಿದೆ.

ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪಟ್ಟಣದ ಸಂಗೀತ ಮೊಬೈಲ್ ಸೆಂಟರ್‌ನ ವ್ಯವಸ್ಥಾಪಕ ಸಂಜಯ್ ಕೊಟ್ಟಿಗೆಹಾರ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News