ಕಾಂಗ್ರೆಸ್ ಪಕ್ಷ ಸರ್ವನಾಶದ ಅಂಚಿನಲ್ಲಿ : ಗೋವಿಂದರಾಜು
ಹಾಸನ,ಡಿ.2: ಸ್ಲಂ ಜನರ ಬಗ್ಗೆ ಗಮನ ನೀಡದ ಕಾಂಗ್ರೆಸ್ ಪಕ್ಷ ಸರ್ವನಾಶದ ಅಂಚಿನಲ್ಲಿ ಬಂದು ನಿಂತಿದೆ ಎಂದು ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾದ ಗೋವಿಂದರಾಜು ತಿಳಿಸಿದರು.
ನಗರದ ಕೆ.ಆರ್. ಪುರಂನಲ್ಲಿರುವ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಸ್ಲಂ ಮೋರ್ಚಾದ ಕಾರ್ಯಕಾರಣಿ ಸಭೆಯಲ್ಲಿ ಶುಕ್ರವಾರ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಓಟ್ ಬ್ಯಾಂಕ್ ರಾಜಕಾರಣ ಮಾಡುವುದರ ಮೂಲಕ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಒಂದು ಪಕ್ಷ ಜನರ ಮೆಚ್ಚುಗೆಗೆ ಪಾತ್ರವಾಗಬೇಕಂದರೆ ಸ್ಲಂನಿಂದ ಮೇಲ್ಮಟ್ಟದವರೆಗೂ ಜನರಲ್ಲಿ ಬೆರೆಯಬೇಕು. ಕೇವಲ ಓಟಿಗಾಗಿ ಜನರ ಮುಂದೆ ನಾಟಕ ಪ್ರದರ್ಶನ ಮಾಡುವ ಪಕ್ಷ ಗಟ್ಟಿಯಾಗಿ ಉಳಿಯುವುದಿಲ್ಲ ಎಂದರು. ಪಕ್ಷದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಪಕ್ಷವನ್ನು ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ಲಂ ಮಟ್ಟಕ್ಕೆ ತೆರಳಿ ಅಲ್ಲಿ ಅಂಗನವಾಡಿ ಕೇಂದ್ರ, ಆಸ್ಪತ್ರೆ, ಶಾಲೆ ಸೇರಿದಂತೆ ಇತರೆ ಸೌಲಭ್ಯದ ಕುರಿತು ಪರಿಶೀಲಿಸಬೇಕು. ಆಗ ಅಲ್ಲಿನ ಜನರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕನಿಷ್ಟ 5 ಸೀಟುಗಳನಾದರೂ ಗೆಲ್ಲುವ ಮೂಲಕ ಇಲ್ಲಿನ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವಂತೆ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು. ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರದಿಂದ ಇಂದು ಕಳ್ಳ ಹಣವನ್ನು ಎಲ್ಲಿ ಇಡುವುದು ಎಂಬ ಯೋಚನೆಯಲ್ಲಿ ಅನೇಕ ರಾಜಕಾರಣಿಗಳ ನಿದ್ದೆಗೆಡಿಸಿದೆ ಎಂದು ದೂರಿದರು.
ಇಂದು ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಮುಖಂಡರ ಗೈರು ಹಾಜರಿ ಬಗ್ಗೆ ಇದೆ ವೇಳೆ ಅಸಾಮಾಧಾನ ವ್ಯಕ್ತಪಡಿಸಿದರು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದರು.
ಇದೆ ವೇಳೆ ಸ್ಲಂ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಎಸ್.ಡಿ. ಚಂದ್ರು, ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಮಲ್ಲಿಗೆವಾಳ್ ದೇವಪ್ಪ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಅಶೋಕ್, ಸಂಘಟನಾ ಕಾರ್ಯದರ್ಶಿ ಭಾಸ್ಕರ್, ಸ್ಲಂ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್, ರಘು, ಯೋಗೀಶ್, ಜಿಲ್ಲಾ ಮಾಧ್ಯಮ ವಕ್ತಾರ ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು.