×
Ad

ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ಮೈಕ್ರೋ ಎಟಿಎಂನಿಂದ ಹಣ ಸೌಲಭ್ಯ

Update: 2016-12-02 23:00 IST

ಮೂಡಿಗೆರೆ, ಡಿ.2: ಕೊಟ್ಟಿಗೆಹಾರದ ದುರ್ಗಾಂಭ ಪೆಟ್ರೋಲ್ ಬಂಕ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೈಕ್ರೋ ಎಟಿಎಂನಿಂದ ಣ ಪಡೆಯುವ ಸೌಲಭ್ಯ ಒದಗಿಸಲಾಗಿದೆ
ದುರ್ಗಾಂಭ ಪೆಟ್ರೋಲ್ ಬಂಕ್‌ನ ವ್ಯವಸ್ಥಾಪಕ ಶರತ್ ಮಾತನಾಡಿ, ಜನರು ಬ್ಯಾಂಕಿನ ಎಟಿಎಂ ಮುಂದೆ ಸರದಿ ಸಾಲಿನಲ್ಲಿ ನಿಂತು 2000 ರೂ. ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. 16 ಕಿ.ಮೀ ದೂರವಿರುವ ತಾಲೂಕಿನ ಬ್ಯಾಂಕ್‌ಗೆ ಹೋಗಲು ಜನರು ತುಂಬಾ ಹರಸಾಹಸ ಪಡಬೇಕಾಗಿದೆ ಎಂದು ಹೇಳಿದರು.
 ಬ್ಯಾಂಕ್ ಎಟಿಎಂ ಬಂದ್ ಆಗಿ ತಿಂಗಳೇ ಕಳೆದಿದೆ. ಹಾಗಾಗಿ ನಮ್ಮ ಪೆಟ್ರೋಲ್ ಬಂಕ್‌ನಲ್ಲಿ ಜನರಿಗೆ ಅನುಕೂಲ ವಾಗಲೆಂದು ನಮ್ಮ ಮೈಕ್ರೋ ಎಟಿಎಂನಿಂದ ಕೇವಲ 2000ರೂ.ನೀಡುತ್ತೇವೆ. ಇದು ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಿದ್ದೇವೆ. ಇದರಲ್ಲಿ ನಾವು ಯಾವುದೇ ಕಮಿಷನ್ ಪಡೆಯುವುದಿಲ್ಲ. ಉಚಿತವಾಗಿ ತುರ್ತು ಹಣದ ಆವಶ್ಯಕತೆ ಇದ್ದ ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಲು ಶರತ್ ಸಾರ್ವಜನಿಕರಿಗೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News