ಸಿಕ್ಕಿಬಿದ್ದ ಅಧಿಕಾರಿಗಳ ವಿಷಯದಲ್ಲಿ ಕೆಸರೆರಚಾಟ

Update: 2016-12-03 05:25 GMT

ಬೆಂಗಳೂರು, ಡಿ. 3 : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಲೋಕೋಪಯೋಗಿ ಸಚಿವ ಮಹದೇವಪ್ಪನವರ ಆಪ್ತರು ಎಂದು ಹೇಳಲಾದ ಇಬ್ಬರು ಅಧಿಕಾರಿಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಭಾರೀ ಮೊತ್ತ ವಶಪಡಿಸಿಕೊಂಡ ಬಳಿಕ ಈ ವಿಷಯದಲ್ಲಿ ರಾಜಕೀಯ ಕೆಸರೆರಚಾಟ ಪ್ರಾರಂಭವಾಗಿದೆ. 

ನೋಟು ರದ್ಧತಿಯಿಂದ ಟೀಕೆ ಎದುರಿಸಲು ಹೆಣಗಾಡುತ್ತಿದ್ದ ವಿಪಕ್ಷ ಬಿಜೆಪಿ ಈಗ ಈ ವಿಷಯವನ್ನಿಟ್ಟುಕೊಂಡು ಸಿದ್ದು ಸರಕಾರದ ಮೇಲೆ ಮುಗಿಬಿದ್ದಿದೆ. ಅದರ ಮುಖಂಡರು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಹುಳುಕು ತೋರಿಸಿ ಪ್ರತ್ಯುತ್ತರ ನೀಡುವ ಯತ್ನದಲ್ಲಿದ್ದಾರೆ. 

ರಾಜ್ಯಸಭಾ ಸದಸ್ಯ , ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿ " ಕರ್ನಾಟಕ ಸಿಎಂ ಅವರಿಗೆ ಆಪ್ತರಾಗಿದ್ದರೆ ಎಷ್ಟು ಲಾಭವಿದೆ ಎಂದು ಈಗ ಸಾಬೀತಾಗಿದೆ. ಕೇವಲ ಚೀಫ್ ಇಂಜಿನಿಯರ್ ಬಳಿಯೇ 50 ಕೋಟಿ ಇದ್ದರೆ ಇನ್ನು ಮೇಲಿನವರ ಬಳಿ ಎಷ್ಟಿರಬಹುದು ? " ಎಂದು ಪ್ರಶ್ನಿಸಿದ್ದಾರೆ. 

ಇದಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು "  ಹೌದು .. ಹಾಗೆಯೇ ಕರ್ನಾಟಕ ದೊಡ್ಡ ಉದ್ಯಮ ಕುಳಗಳಿಗೆ (ಅರ್ಹವಾಗಿಯೇ  ) ರಾಜ್ಯಸಭಾ ಸ್ಥಾನ ಗಿಟ್ಟಿಸಲು ಉತ್ತಮ ವೇದಿಕೆಯಾಗಿದೆ " ಎಂದು ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News