ಟ್ರ್ಯಾಕ್ಟರ್ ಬೈಕ್ ಢಿಕ್ಕಿ : ದಂಪತಿ ಸಾವು
Update: 2016-12-04 22:46 IST
ಬೆಳಗಾವಿ, ಡಿ.4: ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬೆಳಗಾವಿ ಕಣಗಲಾ ಗ್ರಾಮದ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮ, ಸುಭಾಷ ಪಾಟೀಲ (೪೫), ಸುರೇಖಾ ಪಾಟೀಲ (೩೮) ಮೃತರು ಎಂದು ತಿಳಿದು ಬಂದಿದೆ.
ನಿಪ್ಪಾಣಿ ಯಿಂದ ಹಂಚಿನಾಳ ಗ್ರಾಮಕ್ಕೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಅಪಘಾತ ಸಂಭವಿಸಿದೆ.
ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.